ವಿಜಯಪುರದ ಚೇತನಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಣ್ಣು ದಿನಾಚರಣೆಯನ್ನು ಸಂಸ್ಥೆ ಅಧ್ಯಕ್ಷೆ ರಾಜಶ್ರೀ ಜುಗುತಿ ನೆರವೇರಿಸಿದರು. ಪ್ರೊ. ಎ.ಎಚ್​. ಕೊಳಮಲಿ, ಹೇಮಾ ಪಾಟ್ನೆ ಮತ್ತಿತರರಿದ್ದಾರೆ. 
ಜಿಲ್ಲೆ

ಮಣ್ಣಿನ ಮಹತ್ವ ಅರಿಯಿರಿ

ಗಿರೀಶ ಸಗರ

ವಿಜಯಪುರ : ಮಣ್ಣು ನಮ್ಮ ಜೀವನದ ಹೊನ್ನು. ಮಣ್ಣಿಲ್ಲ ಎಂದರೆ ಹೊತ್ತಿನ ತುತ್ತು ಕೂಡ ಸಿಗುವುದಿಲ್ಲ. ಎಲ್ಲರೂ ಮಣ್ಣಿನ ಮಹತ್ವವನ್ನು ಅರಿಯಬೇಕು ಎಂದು ಚೇತನಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಜುಗತಿ ಹೇಳಿದರು.

ನಗರದ ಚೇತನಾ ಸಮೂಹ ಶಿಕ್ಷಣ ಸಂಸ್ಥೆಯ ಚೇತನಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಣ್ಣು ನಮ್ಮ ಬದುಕು. ಅದು ನಮ್ಮ ಭವಿಷ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮುಖ್ಯ ಗುರು ಪ್ರೊ. ಎ.ಎಚ್​. ಕೊಳಮಲಿ ಮಾತನಾಡಿ, ಹೆಚ್ಚುತ್ತಿರುವ ಪರಿಸರ ನಾಶ, ಭೂಮಿಗೆ ರಾಸಾಯನಿಕ ಸಿಂಪರಣೆ, ಭೂಮಿ ಆಳವನ್ನು ಕೊರೆಯುವುದರಿಂದ ಮಣ್ಣಿನ ಸವಕಳಿಗೆ ಕಾರಣವಾಗಿವೆ. ಹೀಗಾಗಿ, ಗುಡ್ಡ ಕುಸಿತದಂತ ಅಪಾಯಗಳನ್ನು ಮನುಷ್ಯನೇ ಎದುರಿಸುವಂತಾಗಿದೆ. ಜಗತ್ತಿನ ಎಲ್ಲ ಜೀವಿಗಳಿಗೆ ಆಹಾರ ಸಿಗುತ್ತಿರುವುದು ಮಣ್ಣಿನ ಮೂಲಗಳಿಂದಲೆ. ಆದ್ದರಿಂದ ಮಣ್ಣಿನ ರಕ್ಷಣೆ ಪ್ರತಿಯೊಬ್ಬರ ಮಾಡಲು ಮುಂದಾಗಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ಮಣ್ಣಿನ ಮಹತ್ವದ ಕುರಿತು ಮಾತನಾಡಿದರು. ಸಂಸ್ಥೆಯ ಉಪಾಧ್ಯಕ್ಷ ರೋಹಿತ ಜುಗತಿ, ನಿರ್ದೇಶಕ ಡಾ. ನಾಗರಾಜ ಹೆರಲಗಿ, ಸಹಾಯಕ ಆಡಳಿತಾಧಿಕಾರಿ ಸಿ.ಎಸ್​. ವಾಲಿ, ಸಾಗರ ಕುಲಕರ್ಣಿ, ಹೇಮಾ ಪಾಟ್ನೆ ಮತ್ತಿತರರಿದ್ದರು.