ಜಿಲ್ಲೆ

ಕೃಷಿ ಜತೆಗೆ ಮಾರುಕಟ್ಟೆ ಮೌಲ್ಯ ಅರಿತುಕೊಳ್ಳಿ

ಕಿರಣ್ ಗೌಡ.ಜಿ

ಗುಂಡ್ಲುಪೇಟೆ: ರೈತರು ಬೆಳೆ ಬೆಳೆಯುವ ಜತೆಗೆ ಅವುಗಳ ಮೌಲ್ಯವರ್ಧನೆ ಮಾಡುವುದನ್ನು ಕಲಿಸಿದರೆ ಮಾತ್ರ ನೆಮ್ಮದಿಯಾಗಿ ಬದುಕಲು ಸಾಧ್ಯ ಎಂದು ಸಾಮೂಹಿಕ ನಾಯಕತ್ವದ ರೈತ ಸಂಘಟನೆಯ ರಾಜ್ಯ ಸಮಿತಿಯ ಸದಸ್ಯ ಹೊನ್ನೂರು ಪ್ರಕಾಶ್ ಹೇಳಿದರು.

ತಾಲೂಕಿನ ಚನ್ನವಡೆಯನಪುರ ಗ್ರಾಮದಲ್ಲಿ ಭಾನುವಾರ ರೈತ ಸಂಘದ ಗ್ರಾಮಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಲೀಟರ್ ಹಾಲಿನಲ್ಲಿ ಕಾಲು ಕೆಜಿ ಪೇಡಾ ತಯಾರಿಸಲಾಗುತ್ತಿದೆ. 4 ಲೀಟರ್ ಹಾಲಿಗೆ 10 ಗ್ರಾಂ ಬೆಲ್ಲ ಸೇರಿಸಿ ಸಂಸ್ಕರಿಸಿದರೆ ಒಟ್ಟು 150 ರೂಪಾಯಿ ಖರ್ಚಿನಲ್ಲಿ ಒಂದು ಕೆಜಿ ಪೇಡಾ ಸಿದ್ದವಾಗುತ್ತಿದ್ದು ಇದಕ್ಕೆ ಮಾರುಕಟ್ಟೆಯಲ್ಲಿ 600 ರೂಪಾಯಿ ಬೆಲೆಯಿದೆ. ಇದನ್ನು ಸಿದ್ದಪಡಿಸಿ ಮಾರಾಟ ಮಾಡುವವರು ಲಾಭಗಳಿಸಿದರೆ ಹಾಲು ಉತ್ಪಾದಕರು ತೀವ್ರ ನಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ರೈತರಿಗೆ ಬೆಳೆ ಬೆಳೆಯುವ ಜತೆಗೆ ಅವುಗಳಿಗೆ ಮಾರುಕಟ್ಟೆಯಲ್ಲಿ ಮೌಲ್ಯವರ್ಧನೆಯಾಗುವ ವಿಧಾನಗಳನ್ನು ಕಲಿಸಿಕೊಡಬೇಕು. ಇದಕ್ಕಾಗಿ ರೈತರು ಸಂಘಟಿತರಾಗಬೇಕಾದ ಅಗತ್ಯವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷೀಯ ಮಂಡಳಿಯ ಸದಸ್ಯ ಪಾಪಣ್ಣ, ಹಸಿರು ಸೇನೆಯ ಸಂಚಾಲಕ ಮಾದಪ್ಪ, ಶಶಿ, ಲೋಕೇಶ್, ಮಹೇಶ್, ಷಣ್ಮುಖಸ್ವಾಮಿ, ಮಹದೇವಸ್ವಾಮಿ, ಸಿದ್ದೇಶ್ ಹಾಗೂ ಇತರರು ಇದ್ದರು.