11 ಅಡಿ ಎತ್ತರದ ಪಾರ್ಶ್ವನಾಥ ಸ್ವಾಮಿಯ ವಿಗ್ರಹ  
ಜಿಲ್ಲೆ

ಅರಮನೆ ಪದ್ಮರಾಜ ಪಂಡಿತರ ಜೈನ ಬ್ರಾಹ್ಮಣ ವಿದ್ಯಾರ್ಥಿನಿಲಯದ ಆಶ್ರಯದಲ್ಲಿ ‘ಬೇಸಿಗೆ ಧಾರ್ಮಿಕ ಶಿಬಿರ’ಕ್ಕೆ ಚಾಲನೆ

ಮೈಸೂರು: ಅರಮನೆ ಪದ್ಮರಾಜ ಪಂಡಿತರ ಜೈನ ಬ್ರಾಹ್ಮಣ ವಿದ್ಯಾರ್ಥಿನಿಲಯದ ಆಶ್ರಯದಲ್ಲಿ ಜೆಎಲ್‌ಬಿ ರಸ್ತೆಯ ಜೈನ ಬ್ರಾಹ್ಮಣ ವಿದ್ಯಾರ್ಥಿನಿಲಯದಲ್ಲಿ ಆಯೋಜಿಸಿರುವ ‘ಬೇಸಿಗೆಯ ಧಾರ್ಮಿಕ ಶಿಬಿರ’ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೈನ ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಲಕ್ಷ್ಮೀರಮಣ ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯದರ್ಶಿ ಶಾಮಾನಂದ ಸಾಗರ ಅಧ್ಯಕ್ಷತೆ ವಹಿಸಿದ್ದರು. ಜಂಟಿ ಕಾರ್ಯದರ್ಶಿ ನಮಿ ತೇಜು, ಪ್ರಮುಖರಾದ ಎಂ.ಪಿ.ನಾಭಿರಾಜ್ ಇದ್ದರು. ಬೇಸಿಗೆಯ ಧಾರ್ಮಿಕ ಶಿಬಿರವು ಏಪ್ರಿಲ್ 12ರ ವರೆಗೆ ನಡೆಯಲಿದ್ದು, ಕೆ.ಮಧುಮತಿ ನಾಭಿರಾಜ್, ಕೆ.ಶ್ಯಾಮಲಾದೇವಿ, ಸವಿತಾ ಪ್ರಸಾದ್, ಸಾಧನ ರವೀಂದ್ರ, ಶೈಲಜಾ ಶಾಮಾನಂದ ಸಾಗರ್ ಉಪನ್ಯಾಸ ನೀಡಲಿದ್ದಾರೆ.