ಜಿಲ್ಲೆ

ನರೇಗಾ ಅನುದಾನದಡಿ ಅಭಿವೃದ್ಧಿ ಕಾರ್ಯ ಮಾಡಿ

ರಾಘವೇಂದ್ರಗೌಡ ಭೀ ಪಾಟೀಲ್

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ನರ್ಸರಿ ಕೇಂದ್ರ, ನಂದಗಾಂವ, ಸಂಕೋನಟ್ಟಿ ಸೇರಿ ವಿವಿಧ ಗ್ರಾಮಗಳಲ್ಲಿರುವ ಕೂಸಿನ ಮನೆಗಳಿಗೆ ಹಾಗೂ ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಸ್ಥಳಕ್ಕೆ ಬೆಳಗಾವಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ರವೀಂದ್ರ ಬಂಗಾರೆಪ್ಪನವರ ಈಚೆಗೆ ಭೇಟಿ ನೀಡಿ ಪರಿಶೀಲಿಸಿದರು.

ಜಿಪಂ ಯೋಜನಾ ನಿರ್ದೇಶಕ ರವೀಂದ್ರ ಬಂಗಾರೆಪ್ಪನವರ ಮಾತನಾಡಿ, ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಕೆರೆ, ಹಳ್ಳ-ಕೊಳ್ಳಗಳನ್ನು ಹೂಳೆತ್ತಬೇಕು. ನರೇಗಾ ಅನುದಾನ ಬಳಸಿ ಶಾಲೆ ಮೈದಾನ, ಹೆಚ್ಚು ಸಸಿ ನೆಡುವುದು ಸೇರಿ ವಿವಿಧ ಅಭಿವೃದ್ಧಿ ಕೈಗೊಳ್ಳಬೇಕು. ಕೂಸಿನ ಮನೆಯ ಮಕ್ಕಳ ಲಾಲನೆ, ಪಾಲನೆಯಲ್ಲಿ ತಾರತಮ್ಯವಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ತಾಪಂ ಎಡಿ ಮೈಬೂಬ್ ಖೋತ್ವಾಲ್, ಐಯಿಸಿ ಸಂಯೋಜಕ ಶಿವಾನಂದ ಸಾವಗಾಂವ, ಅರಣ್ಯ ಇಲಾಖೆ ಅಧಿಕಾರಿ ಪ್ರಶಾಂತ ಗೌರಣಿ, ರಾಜೇಶ ಪಾಟೀಲ, ಎಸ್.ಎಸ್.ಕನಾಳ, ಗ್ರಾಪಂ ಅಧ್ಯಕ್ಷ ಶ್ರೀಶೈಲ ಕಾಂಬಳೆ, ಪಿಡಿಒಗಳಾದ ಸುಭಾಷ ಹುಬ್ಬಳ್ಳಿ, ಬೀರಪ್ಪ ಕಡಗಂಚಿ, ಅಭಿಯಂತ ವಿಶ್ವನಾಥ ಮಟಗಾರ, ಕಾರ್ಯದರ್ಶಿ ರಾಜು ಕರಾಂಡೆ ಇತರರಿದ್ದರು.