ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಬಲ್ಲಚಂಡ ಟಿಟ್ಟು ಜ್ಞಾಪಕಾರ್ಥ ಕಡಂಗ ವಿಜಯ ವಿದ್ಯಾಸಂಸ್ಥೆ ಮೈದಾನದಲ್ಲಿ ಆಯೋಜಿಸಿದ್ದ ೨ನೇ ವರ್ಷದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಉಂಡಪ್ಪರ ವಾರಿಯರ್ಸ್ ತಂಡ ಪ್ರಥಮ ಸ್ಥಾನ ಪಡೆಯಿತು. ಎಸ್‌ಎಂಎಸ್ ಫ್ರೆಂಡ್ಸ್ ತಂಡ ದ್ವಿತೀಯ ಸ್ಥಾನ ಪಡೆಯಿತು.
ಉತ್ತಮ ಆಟಗಾರ ಬಹುಮಾನವನ್ನು ಪ್ರಶಸ್ತಿ ಸೀನಾನ್, ಉತ್ತಮ ಪಾಸರ್ ಬಹುಮಾನವನ್ನು ಆದಿಲ್ ನಾಪೋಕ್ಲು ತಮ್ಮದಾಗಿಸಿಕೊಂಡರು.
ಅರಫ ಮತ್ತು ಲಿಂಬ್ರ ಫ್ರೆಂಡ್ಸ್ ವತಿಯಿಂದ ಆಯೋಜಿಸಿದ್ದ ಪಂದ್ಯಾವಳಿಗೆ ಬಲ್ಲಚಂಡ ಕುಸುಮಾ ಟಿಟ್ಟು ಚಾಲನೆ ನೀಡಿದರು. ಅರಫ ಮತ್ತು ಲಿಂಬ್ರ ಫ್ರೆಂಡ್ಸ್ ಕ್ರೀಡಾ ಸಂಚಾಲಕ ಅಬ್ದುಲ್ ಕರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಅರಫ ಮತ್ತು ಲಿಂಬ್ರ ಫ್ರೆಂಡ್ಸ್ ಪ್ರಮುಖ ರಾದ ಅಬ್ದುಲ್ ರಹಮಾನ್ ಅರಫ, ವಿಜಯ ವಿದ್ಯಾಸಂಸ್ಥೆ ಅಧ್ಯಕ್ಷ ಬಲ್ಯಂಡ ಉದಯ, ಕಾಕೋಟುಪರಂಬು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇವಡ ಗಿರೀಶ್, ಗ್ರಾಮ ಪಂಚಾಯಿತಿ ಸದಸ್ಯ ಸುಬ್ಬೀರ್ ಪಾಲ್ಗೊಂಡಿದ್ದರು. ನಿವೃತ್ತ ಯೋಧರಾದ ಸಲಾಂ, ಸುಬ್ಬಯ್ಯ ಅವರನ್ನು ಸನ್ಮಾನಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಕೆಪಿಸಿಸಿ ವಕ್ತಾರ ಎ.ಎಸ್. ಪೊನ್ನಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ, ಪ್ರಮುಖರಾದ ಬಲ್ಲಚಂಡ ರವಿ, ಬಲ್ಲಚಂಡ ಪೂವಿ ಸೋಮಣ್ಣ, ಮಹಮ್ಮದ್ ರಫಿ, ಬಾನಂಡ ಪ್ರತ್ಯು, ಕೋಡಿರ ವಿನೋದ್ ನಾಣಯ್ಯ, ಬಲ್ಟಿಕಾಳಂಡ ರಂಜಿ, ಬಲ್ಲಚಂಡ ಬೋಪಣ್ಣ, ಕುಲಚಂಡ ಪ್ರಮೋದ್ ಗಣಪತಿ, ನಾಸಿರ್ ವಿರಾಜಪೇಟೆ, ಶಾಫಿ ಎಡಪಲ ಮತ್ತಿತರರು ಇದ್ದರು. ನೌಫಲ್ ಕಡಂಗ ಸ್ವಾಗತಿಸಿದರು.