ಶಿಗ್ಗಾಂವಿ(ಗ್ರಾ): ತಾಲೂಕಿನ ನಾರಾಯಣಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸಿರಾಜ್‌ಅಹ್ಮದ ಮುಲ್ಲಾ, ಉಪಾಧ್ಯಕ್ಷರಾಗಿ ಲಕ್ಷ್ಮಿ ಶೆಟ್ಟರ್ ಬುಧವಾರ ಅವಿರೋಧವಾಗಿ ಆಯ್ಕೆಯಾದರು.
12 ಸದಸ್ಯರ ಬಲ ಹೊಂದಿರುವ ನಾರಾಯಣಪುರ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಬುಧವಾರ ನಿಗದಿಯಾಗಿದ್ದ ಚುನಾವಣೆಗೆ ಅಧ್ಯಕ್ಷ ಸ್ಥಾನಕ್ಕೆ ಸಿರಾಜ್‌ಅಹ್ಮದ ಮುಲ್ಲಾ ಮತ್ತು ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಗ್ರಾಪಂ ಸದಸ್ಯ ಶಂಭುಲಿಂಗಪ್ಪ ಆಜೂರ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಿ ಶೆಟ್ಟರ ಮಾತ್ರ ನಾಮಪತ್ರ ಸಲ್ಲಿಸಿದರು. ಶಂಭುಲಿಂಗಪ್ಪ ಆಜೂರ ನಾಮಪತ್ರ ಹಿಂಪಡೆದರು. ಅಧ್ಯಕ್ಷರಾಗಿ ಸಿರಾಜ್‌ಅಹ್ಮದ ಮುಲ್ಲಾ, ಉಪಾಧ್ಯಕ್ಷರಾಗಿ ಲಕ್ಷ್ಮಿ ಶೆಟ್ಟರ್ ಅವಿರೋಧವಾಗಿ ಆಯ್ಕೆಯಾದರು. ಚುನಾವಣೆ ಅಧಿಕಾರಿಯಾಗಿ ಕಿಶೋರಕುಮಾರ ನಾಯ್ಕ, ವಿಜಯಕುಮಾರ ಪೂಜಾರ ಕಾರ್ಯನಿರ್ವಹಿಸಿದರು.