ಗುಳೇದಗುಡ್ಡ ತಾಲೂಕಿನ ಹಂಗರಗಿ ಗ್ರಾಪಂ ಅಧ್ಯಕ್ಷರಾಗಿ ರುಕ್ಮವ್ವ ಪಾರ್ದಿ, ಉಪಾಧ್ಯಕ್ಷರಾಗಿ ಶೋಭಾ ಹಿರೇಮಠ ಆಯ್ಕೆಯಾದರು. ಮಲ್ಲಪ್ಪ ಕುರಿ, ಕೀರಪ್ಪ ಉಗಲವಾಟ, ಹನುಮಂತ ಬಿಳೇಕಲ್ಲ, ಸೈಯದ್ ಖಾಜಿ, ಭೀಮವ್ವ ಹಾನಾಪೂರ ಇತರರಿದ್ದರು. 
ಜಿಲ್ಲೆ

ಹಂಗರಗಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಅಯ್ಕೆ

ಗುಳೇದಗುಡ್ಡ : ತಾಲೂಕಿನ ಹಂಗರಗಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ರುಕ್ಮವ್ವ ರಾಮಚಂದ್ರಪ್ಪ ಪಾರ್ದಿ ಹಾಗೂ ಉಪಾಧ್ಯಕ್ಷರಾಗಿ ಶೋಭಾ ದುಂಡಯ್ಯ ಹಿರೇಮಠ ಅವಿರೋಧವಾಗಿ ಶನಿವಾರ ಆಯ್ಕೆಯಾದರು.

ಚುನಾವಣಾಧಿಕಾರಿ ಅಸ್ಲಂ ಮುಜಾವರ ಕಾರ್ಯ ನಿರ್ವಹಿಸಿದರು. ಒಟ್ಟು 13 ಸದಸ್ಯರ ಸಂಖ್ಯಾಬಲದ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಇಬ್ಬರು ಸದಸ್ಯರು ಗೈರಾಗಿದ್ದರು.

ಮಲ್ಲಪ್ಪ ಕುರಿ, ಕೀರಪ್ಪ ಉಗಲವಾಟ, ಹನುಮಂತ ಬಿಳೇಕಲ್ಲ, ಸೈಯದ್ ಖಾಜಿ, ಭೀಮವ್ವ ಹಾನಾಪೂರ, ತಾಯವ್ವ ಕವಡಿಮಟ್ಟಿ, ಪಾರ್ವತಿ ಬಂದಕೇರಿ, ರುದ್ರಮ್ಮ ಕಟಗೇರಿ, ಶೇಖಪ್ಪ ಉಡಚಂಚಿ ಹಾಜರಿದ್ದರು.

ಗ್ರಾಪಂ ಪಿಡಿಒ ರಾಮಚಂದ್ರ ಮೇತ್ರಿ, ರಮೇಶ ಪದಕಿ, ವಿನಾಯಕ ಹೋಟಿ, ತಾಪಂ ಮಾಜಿ ಅಧ್ಯಕ್ಷ ಪ್ರಮೋದ ಕವಡಿಮಟ್ಟಿ, ಸಂಗಮೇಶ ಸಾಳಗುಂದಿ, ರಜಾಕಸಾಬ ಖಾಜಿ, ಶಿವಪುತ್ರಪ್ಪ ಸಾಳಗುಂದಿ, ಶಿವಪ್ಪ ಈಶ್ವರಪ್ಪನವರ, ಈರಪ್ಪ ಸಾಳಗುಂದ, ರಂಗಪ್ಪ ರಂಗಣ್ಣವರ, ವಿಠ್ಠಲ ಗೋಳನ್ನವರ, ಅಡಿವೆಪ್ಪ ಸಾಳಗುಂದಿ, ನಾಗರಾಜ ಸಾಳಗುಂದಿ, ವಿ.ಕೆ. ಕವಡಿಮಟ್ಟಿ, ಮಲ್ಲಿಕಾರ್ಜುನ ಮೇಟಿ, ರಮೇಶ ಕರಕಿಕಟ್ಟಿ, ಸೈಯದ್ ಇನಾಮದಾರ, ಭೀಮಪ್ಪ ನರಸಾಪುರ, ಸುಶೀಲಾಬಾಯಿ ಹೆಬ್ಬಳ್ಳಿ ಇತರರಿದ್ದರು.