ಜಿಲ್ಲೆ

ಸತ್ತಿ ಗ್ರಾಪಂಗೆ ಅವಿರೋಧ ಆಯ್ಕೆ

ನಂದೇಶ್ವರ: ಸತ್ತಿ ಗ್ರಾಪಂಗೆ ಗುರುವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷೆಯಾಗಿ ಸುಜಾತಾ ಸನದಿ ಮತ್ತು ಉಪಾಧ್ಯಕ್ಷರಾಗಿ ಸಂಜೀವ ಜಮಖಂಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  

ಸತ್ತಿ ಗ್ರಾಪಂಗೆ ಆಯ್ಕೆಯಾದ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರನ್ನು ಗ್ರಾಮಸ್ಥರು ಸತ್ಕರಿಸಿದರು. ಬಿ.ಆರ್.ಪಾಟೀಲ, ಪರಪ್ಪ ಚಮಕೇರಿ, ವಿಠ್ಠಲ ತಟ್ರಿ ಇತರರಿದ್ದರು.

ಚುನಾವಣಾಕಾರಿಯಾಗಿ ಎಸ್.ಜಿ. ಲಾಂಡಗೆ ಕಾರ್ಯನಿರ್ವಹಿಸಿದರು. ಹಿರಿಯ ಮುಖಂಡ ಬಿ.ಆರ್.ಪಾಟೀಲ, ಪಿಡಿಒ ಮುತ್ತಣ್ಣ ಗುರವ, ಪರಪ್ಪ ಚಮಕೇರಿ, ವಿಠ್ಠಲ ತಟ್ರಿ, ಬಸಪ್ಪ ಜಮಖಂಡಿ, ಅಶೋಕ ಸಲಗರ, ಜಡೆಪ್ಪ ಕುಂಬಾರ, ಪ್ರಕಾಶ ಭೂಷನ್ನವರ, ಮಹಾದೇವಗೌಡ ಪಾಟೀಲ, ಬಸವರಾಜ ಭಜರಂಗಿ, ಉಮರ್ ತಾಸಗಾಂವ, ಬಸವರಾಜ ತಮದಡ್ಡಿ, ಸಾಬು ಚಿನಗುಂಡಿ, ಅಮರಶಿರ್ಪ ಡಾಂಗೆ, ಪ್ರಕಾಶ ಗುಡ್ಡಾಪುರ ಇತರರಿದ್ದರು.