ಮದ್ದೂರು ತಾಲೂಕಿನ ಡಿ.ಮಲ್ಲಿಗೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಜೆಡಿಎಸ್ ಬೆಂಬಲಿತರಾದ ಎಂ.ಬಿ.ರಮೇಶ್ ಅಧ್ಯಕ್ಷ ಮತ್ತು ಜಯಮ್ಮ ಉಪಾಧ್ಯಕ್ಷರಾಗಿ ಅವಿರೋಧವಾಗಿ ಅಯ್ಕೆಗೊಂಡರು. ರಾಜಣ್ಣ, ನಂಜುಂಡಯ್ಯ, ಬಳಿಯಪ್ಪ, ರಾಮಚಂದ್ರ, ವನಜಾಕ್ಷಿ, ಪಟೇಲ್ ಮರಿಯಣ್ಣ, ಎಂ.ಸಿ.ಮಂಜು, ಎಂ.ಎನ್.ಸ್ವಾಮಿಗೌಡ, ಮೇಲ್ ಗಿರಿ ಇದ್ದರು. 
ಜಿಲ್ಲೆ

ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ

ಮಾದೇಶ್ ತಿ.ನರಸೀಪುರ

ಮದ್ದೂರು: ತಾಲೂಕಿನ ಡಿ.ಮಲ್ಲಿಗೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಜೆಡಿಎಸ್ ಬೆಂಬಲಿತರಾದ ಎಂ.ಬಿ.ರಮೇಶ್ ಅಧ್ಯಕ್ಷ ಮತ್ತು ಜಯಮ್ಮ ಉಪಾಧ್ಯಕ್ಷರಾಗಿ ಅವಿರೋಧವಾಗಿ ಅಯ್ಕೆಗೊಂಡರು.

ಸಂಘದ ಸಭಾಂಗಣದಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಈ ಇಬ್ಬರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಇವರ ಆಯ್ಕೆಯನ್ನು ಚುನಾವಣಾಧಿಕಾರಿ ಧರಣೇಂದ್ರಕುಮಾರ್ ಘೋಷಣೆ ಮಾಡಿದರು.

ಸಂಘದ ಅಧ್ಯಕ್ಷ ರಮೇಶ್ ಮಾತನಾಡಿ, ಸಂಘದ ಎಲ್ಲ ನಿರ್ದೇಶಕರ ವಿಶ್ವಾಸ ಪಡೆದು ಹಾಲು ಉತ್ಪಾದಕರಿಗೆ ಅನುಕೂಲ ಕಲ್ಪಿಸಲಾಗುವುದು ಹಾಗೂ ಸಂಘದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಸಂಘದ ನಿರ್ದೇಶಕರಾದ ರಾಜಣ್ಣ, ನಂಜುಂಡಯ್ಯ, ಬಳಿಯಪ್ಪ, ರಾಮಚಂದ್ರ, ವನಜಾಕ್ಷಿ, ಪಟೇಲ್ ಮರಿಯಣ್ಣ, ಮುಖಂಡರಾದ ಎಂ.ಸಿ.ಮಂಜು, ಎಂ.ಎನ್.ಸ್ವಾಮಿಗೌಡ, ಮೇಲ್‌ಗಿರಿ ಇದ್ದರು.