Uncontested choice 
ಜಿಲ್ಲೆ

ಚಿಕ್ಕಕೋಲಿಗ ಡೇರಿಗೆ ನಾರಾಯಣಸ್ವಾಮಿ ಅಧ್ಯಕ್ಷ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ
ಹೋಬಳಿಯ ಚಿಕ್ಕಕೋಲಿಗ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಚ್.ನಾರಾಯಣಸ್ವಾಮಿ, ಉಪಾಧ್ಯಕ್ಷರಾಗಿ ರಘುನಾಥ್ ಹಾಗೂ ನಿರ್ದೇಶಕರು ಅವಿರೋಧ ಆಯ್ಕೆಯಾದರು.
ನೂತನ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಪ್ರತಿಯೊಬ್ಬ ಸದಸ್ಯರ ಸಲಹೆ ಪಡೆದು ಡೇರಿಯ ಏಳಿಗೆಗೆ ಶ್ರಮಿಸಲಾಗುವುದು ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ ಮಾತನಾಡಿ, ಸಂಘದ ಏಳಿಗೆಗೆ ಸರ್ವ ಸದಸ್ಯರು ಪಕ್ಷಾತೀತವಾಗಿ ಶ್ರಮಿಸಬೇಕು. ಸದಸ್ಯರು ಪಶುಗಳಿಗೆ ಉತ್ತಮ ಆಹಾರ ನೀಡುವ ಮೂಲಕ ಉತ್ತಮ ಹಾಲಿನ ಇಳುವರಿ ಪಡೆದು, ಆರ್ಥಿಕವಾಗಿ ಸಬಲರಾಗಬೇಕು. ಡೇರಿಗೂ ಲಾಭ ತರುವ ಕೆಲಸ ಮಾಡಬೇಕು ಎಂದರು.
ಸಾಮಾನ್ಯ ಕ್ಷೇತ್ರದಿಂದ ನಾರಾಯಣಸ್ವಾಮಿ, ಶಂಕರಪ್ಪ, ಬಿ.ರಾಜಣ್ಣ, ಗೋಪಾಲಪ್ಪ, ರಘುನಾಥ್, ನಾರಾಯಣಸ್ವಾಮಿ, ಜಯರಾಮಪ್ಪ, ಮಹಿಳಾ ಕ್ಷೇತ್ರದಿಂದ ಯಶೋದಮ್ಮ, ಸರಸ್ವತಮ್ಮ, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ರಾಮಕೃಷ್ಣಪ್ಪ, ಹಿಂದುಳಿದ ಬಿ ಕ್ಷೇತ್ರದಿಂದ ರಘುನಾಥ್, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ನಾರಾಯಣಸ್ವಾಮಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮುರಳಿಕೃಷ್ಣ ತಿಳಿಸಿದರು.