ಹುನಗುಂದ ಹಿರೇಹಳ್ಳಕ್ಕೆ ಹೊಂದಿಕೊಂಡಿರುವ ತರಕಾರಿ ಮಾರುಕಟ್ಟೆಗೆ ಹೊಂದಿದ ಅಕ್ರಮ ಗೂಡಂಗಡಿಗಳನ್ನು ಪುರಸಭೆಯಿಂದ ತೆರವುಗೊಳಿಸಲಾಯಿತು. 
ಜಿಲ್ಲೆ

ಅನಧಿಕೃತ ಗೂಡಂಗಡಿ ತೆರವು ಕಾರ್ಯಾಚರಣೆ

ದತ್ತಾತ್ರೇಯ ಪಿ ಕುಲಕರ್ಣಿ

ಹುನಗುಂದ: ತರಕಾರಿ ಮಾರುಕಟ್ಟೆಗೆ ಹೊಂದಿಕೊಂಡಿರುವ ಪುರಸಭೆ ಸ್ಥಳದಲ್ಲಿ ಅಕ್ರಮವಾಗಿ ಠಿಕಾಣಿ ಹೂಡಿದ್ದ ಗೂಡಂಗಡಿಗಳನ್ನು ಪುರಸಭೆಯಿಂದ ಸೋಮವಾರ ತೆರವುಗೊಳಿಸಲಾಯಿತು.

ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ ಮಾತನಾಡಿ, ಬಸ್ ನಿಲ್ದಾಣ ಸಮೀಪದ ತರಕಾರಿ ಮಾರುಕಟ್ಟೆಗೆ ಬರಲು ಜನರು ತೊಂದರೆ ಅನುಭವಿಸುತ್ತಿದ್ದರು. ಸಾರ್ವಜನಿಕರು ಹಿತದೃಷ್ಟಿಯಿಂದ ಪುರಸಭೆ ಸ್ಥಳದಲ್ಲಿದ್ದ ಈ ಅಕ್ರಮ ಅಂಗಡಿಗಳನ್ನು ತೆರವುಗೊಳಿಸಲಾಗಿದೆ ಎಂದರು.

ಪುರಸಭೆ ಸಿಬ್ಬಂದಿ ಮಹಾಂತೇಶ ತಾರಿವಾಳ, ಬಾಬು ಲೈನ್, ಮುತ್ತಣ್ಣ ಹುಣಶಾಳ, ನಿರುಪಾದಿ ಬದಾಮಿ, ಪಕೀರಪ್ಪ ಮರ್ಜಿ, ಪರಸಪ್ಪ ನಡುವಿನಮನಿ, ಹುಸೇನಪ್ಪ ಹಿರೇಮನಿ, ಬಸಯ್ಯ ಹಿರೇಮಠ ಕಾರ್ಯಾಚರಣೆಯಲ್ಲಿ ಇದ್ದರು.