ಜಿಲ್ಲೆ

ಪಟಾಕಿ ಅನಧಿಕೃತ ಮಾರಾಟ

ಸೌಮ್ಯ ಆರ್

ಕಾಸರಗೋಡು: ಅನಧಿಕೃತವಾಗಿ ಪಟಾಕಿ ಮಾರಾಟ ಮಾಡುತ್ತಿದ್ದ ನಾಲ್ಕು ಮಂದಿಯ ವಿರುದ್ಧ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕುಂಜತ್ತೂರು ನಿವಾಸಿ ತೀರ್ಥೇಶ್, ಮಂಜೇಶ್ವರ ಮಿತ್ತಕನಿಲ ನಿವಾಸಿ ಭರತ್, ಮೀಯಪದವಿನ ಅನ್ವರ್ ಸಾದತ್ ಹಾಗೂ ಪೈವಳಿಕೆಯ ಕಾರ್ತಿಕ್ ವಿರುದ್ಧ ಪ್ರಕರಣ ದಾಖಲಾಗಿದೆ. ಅನಧಿಕೃತ ಪಟಾಕಿ ದಾಸ್ತಾನು ಹಾಗೂ ಮಾರಾಟ ನಡೆಯುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಮಂಜೇಶ್ವರ ಠಾಣೆ ಇನ್‌ಸ್ಪೆಕ್ಟರ್ ಟೋನ್ಸನ್ ಜೋಸೆಫ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.