ಚಿಂತಾಮಣಿ: ತಾಲೂಕಿನ ಆಲಂಬಗಿರಿ ಶ್ರೀವೆಂಕಟರಮಣ ಸ್ವಾಮಿ ಸಮೂಹ ದೇವಾಲಯಗಳಲ್ಲಿ 20 ವರ್ಷಗಳಿಂದ ಅನಧಿಕೃತವಾಗಿ ಬಿಡಾರ ಹೂಡಿದ್ದ ಅರ್ಚಕ ಆರ್.ಲ್ಮ ನಾರಾಯಣಾಚಾರ್ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ.
ಲೋಕಾಯುಕ್ತ, ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಹಸೀಲ್ದಾರ್ ಈ ಆದೇಶ ಹೊರಡಿಸಿದ್ದಾರೆ. ಅನಧಿಕೃತವಾಗಿ ಅರ್ಚಕರು ಮತ್ತು ತಾತ್ಕಾಲಿಕ ಸಿಬ್ಬಂದಿ ಸರ್ಕಾರಿ ನಿಯಮ ಉಲ್ಲಂಸಿ ದೇವಾಲಯದ ಹೂವಿನ ತೋಟದಲ್ಲಿ ನಿರ್ಮಾಣ ಮಾಡಿ ಕೊಂಡಿರುವ ಅನಧಿಕೃತ ವಾಸದ ಮನೆಗಳನ್ನು ತೆರವುಗೊಳಿಸುವಂತೆ ಸೂಚಿಸಿದ್ದಾರೆ.20 ವರ್ಷಗಳಿಂದ ದೇವಾಲಯದಲ್ಲಿ ವಸೂಲಾಗಿರುವ ವಿವಿಧ ಸೇವೆಗಳ ಹಣವು ದುರುಪಯೋಗವಾಗಿದ್ದು, ಸಂಬಂಧಪಟ್ಟ ಬಿಲ್ ಕಲೆಕ್ಟರ್ ಮತ್ತು ಕಚೇರಿ ಸಹಾಯಕರನ್ನು ಕೆಲಸದಿಂದ ವಜಾಗೊಳಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ನಗರಸಭೆ ಮಾಜಿ ಸದಸ್ಯ ಎಸ್.ಸುಬ್ರಮಣ್ಯಂ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.