ವಿಜಯವಾಣಿ ಸುದ್ದಿಜಾಲ ಧಾರವಾಡ
ನವಲಗುಂದದ ಪಾರಂಪರಿಕ ಗುಡ್ಡದ ಮಣ್ಣನ್ನು ಅಕ್ರಮವಾಗಿ ಅಗೆದು ಚಕ್ಕಡಿ ರಸ್ತೆ ನಿರ್ಮಾಣಕ್ಕೆ ಬಳಸಲಾಗಿದೆ. ಕ್ಷೇತ್ರದಲ್ಲಿ ಚಕ್ಕಡಿ ರಸ್ತೆ ನಿರ್ಮಾಣದ ಹೆಸರಲ್ಲಿ ಬಹುದೊಡ್ಡ ಹಗರಣವಾಗಿದೆ. ಈ ಕುರಿತು ತನಿಖೆ ನಡೆಸಲು ಒತ್ತಾಯಿಸಿ ಜಿಲ್ಲಾಽಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಶಾಸಕ ಎನ್.ಎಚ್. ಕೋನರಡ್ಡಿ ಅವರು ಕಾನೂನು ಪಾಲಿಸದೆ ರಸ್ತೆ ಮಾಡಿದ್ದಾರೆ. ಕೆಲವೆಡೆ ಇದ್ದ ಡಾಂಬರ್ ತೆಗೆದು ಚಕ್ಕಡಿ ರಸ್ತೆ ಮಾಡಲಾಗಿದೆ. ಸುಮಾರು 100 ಕೋಟಿ ರೂಪಾಯಿ ಮೊತ್ತದ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ ಎಂದು ಶಾಸಕರೇ ಹೇಳಿಕೊಂಡಿದ್ದಾರೆ. ಹಾಗಾದರೆ ಟೆಂಡರ್‌ಗೂ ಮೊದಲೇ ಮುಂಗಡವಾಗಿ ರಸ್ತೆ ಕಾಮಗಾರಿ ಮÁಡಲು ಪರವಾನಿಗೆ ಕೊಟ್ಟವರು ಯಾರು? ಎಂದು ಮುನೇನಕೊಪ್ಪ ಪ್ರಶ್ನಿಸಿದರು.
ಚಕ್ಕಡಿ ರಸ್ತೆ ಮಾಡಲು ಶಾಸಕರು ನವಲಗುಂದದ ಪಾರಂಪರಿಕ ಗುಡ್ಡ ಅಗೆಸಿದ್ದಾರೆ. 2 ತಿಂಗಳಿ0ದ ಸುಮಾರು 3,000 ಟಿಪ್ಪರ್ ಮೋರಂ ಅನ್ನು ಅಕ್ರಮವಾಗಿ ಅಗೆಯಲಾಗಿದೆ. ಕ್ಷೇತ್ರದಲ್ಲಿ ನಡೆಯುತ್ತಿರುವ ಹಗಲು ದರೋಡೆ ಗಮನಕ್ಕೆ ಬರುತ್ತಲೇ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಈ ಬಗ್ಗೆ ವಿಚಾರಿಸಿದಾಗ ಗುಡ್ಡದ ಅಗೆತ ನಿಲ್ಲಿಸಿದ್ದಾರೆ. ಈ ಹಗರಣದ ವಿರುದ್ಧ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಬೇಕು. ಕೂಲಂಕುಷ ತನಿಖೆಗೆ ಆಗ್ರಹಿಸಿ ಜಿಲ್ಲಾಽಕಾರಿ ದಿವ್ಯ ಪ್ರಭು ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ನವಲಗುAದ ಬಿಜೆಪಿ ಮುಖಂಡರಾದ ಶರಣಪ್ಪಗೌಡ ದಾನಪ್ಪಗೌಡರ, ಮೃತ್ಯುಂಜಯ ಹಿರೇಮಠ, ಮಹಾಂತೇಶ ಕಲಾಲ, ಅಡಿವೆಪ್ಪ ಮನಮಿ, ಸಿದ್ದಣ್ಣ ಕಿಟಗೇರಿ, ರೋಹಿತ್ ಮತ್ತಿಹಳ್ಳಿ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.