ಜಿಲ್ಲೆ

ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಬೈಲಹೊಂಗಲ: ಸಾಲಬಾಧೆ ತಾಳಲಾರದೆ ಸಮೀಪದ ಹೊಸೂರ ಗ್ರಾಮದ ರೈತ ಮಲ್ಲಪ್ಪ ಉಳವಪ್ಪ ಕುದರಿಕಾರ (47) ಆತ್ಮಹತ್ಯೆ ಮಾಡಿಕೊಂಡ ಟನೆ ಬುಧವಾರ ನಡೆದಿದೆ.

ಮೃತ ರೈತ ಮಲ್ಲಪ್ಪ ತನ್ನ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಸೋಯಾಬೀನ್​ ಕೀಟಬಾಧೆಯಿಂದ ಹಾನಿಯಾಗಿತ್ತು. ಇದರಿಂದ ಸ್ಥಳಿಯ ಪಿಕೆಪಿಎಸ್​ ಮತ್ತು ಕೆವಿಜಿ ಬ್ಯಾಂಕ್​ನಲ್ಲಿ ಪಡೆದ ಬೆಳೆಸಾಲ ಹಾಗೂ ಬಿತ್ತನೆಗೆ ಮಾಡಿದ್ದ ಕೈಗಡ ಸಾಲ ತಿರಿಸಲಾಗದೆ ಮನನೊಂದು ಮಂಗಳವಾರ ಕೀಟನಾಶಕ ಸೇವಿಸಿದ್ದ. ಚಿಕಿತ್ಸೆಗಾಗಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಮುರಗೋಡ ಪೊಲೀಸ್​ ಠಾಣೆ ಪೊಲೀಸರು ತಿಳಿಸಿದ್ದಾರೆ.