ಮದ್ದೂರು ತಾಲೂಕಿನ ಮಹರ್ನವಮಿದೊಡ್ಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಜಿ.ಉಮೇಶ್ ಅವಿರೋಧವಾಗಿ ಆಯ್ಕೆಯಾದರು. ದೊಡ್ಡಬೀರಹೆಗಡೆ, ಎಂ.ಜಿ.ಮಂಜುನಾಥ್, ರಾಕೇಶ್, ಎಂ.ಎಂ.ಆರ್.ಕುಮಾರ್, ಚಿಕ್ಕಣ್ಣ, ಬಸವರಾಜು, ವರಲಕ್ಷ್ಮಿ, ರಾಮಲಿಂಗ, ಆಶಾ, ಬಾಬುಎಂ.ಆರ್.ಕಾಳೇಗೌಡ ಇದ್ದರು. 
ಜಿಲ್ಲೆ

ಡೇರಿ ಅಧ್ಯಕ್ಷರಾಗಿ ಉಮೇಶ್ ಅವಿರೋಧ ಆಯ್ಕೆ

ಮಾದೇಶ್ ತಿ.ನರಸೀಪುರ

ಮದ್ದೂರು: ತಾಲೂಕಿನ ಮಹರ್ನವಮಿದೊಡ್ಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಜಿ.ಉಮೇಶ್ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಬಸವರಾಜು ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಸಂಘದ ಸಭಾಂಗಣದಲ್ಲಿ ಇತ್ತಿಚೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಂ.ಜಿ.ಉಮೇಶ್ ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಇವರ ಆಯ್ಕೆಯನ್ನು ಚುನಾವಣಾಧಿಕಾರಿ ಸುಮಿತ್ರಾ ಘೋಷಣೆ ಮಾಡಿದರು.

ನೂತನ ಅಧ್ಯಕ್ಷ ಎಂ.ಜಿ.ಉಮೇಶ್ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘದ ಸಮಗ್ರ ಅಭಿವದ್ಧಿಗೆ ಎಲ್ಲ ನಿರ್ದೇಶಕರ ವಿಶ್ವಾಸ ಪಡೆದು ನಿರಂತರವಾಗಿ ಶ್ರಮಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಘದ ಉಪಾಧ್ಯಕ್ಷ ದೊಡ್ಡಬೀರಹೆಗಡೆ, ನಿರ್ದೇಶಕರಾದ ಎಂ.ಜಿ.ಮಂಜುನಾಥ್, ರಾಕೇಶ್, ಎಂ.ಎಂ.ಆರ್.ಕುಮಾರ್, ಚಿಕ್ಕಣ್ಣ, ಬಸವರಾಜು, ವರಲಕ್ಷ್ಮೀ, ರಾಮಲಿಂಗ, ಆಶಾ, ಗ್ರಾಪಂ ಸದಸ್ಯ ಬಾಬು ಎಂ.ಆರ್.ಕಾಳೇಗೌಡ, ಮುಖಂಡರಾದ ವಿಜೇಂದ್ರ, ವೆಂಕಟೇಶ್ ಇದ್ದರು.