ರೇವತಗಾಂವ ಸಮೀಪದ ಉಮರಜ ಗ್ರಾಮದಲ್ಲಿ ನವರಾತ್ರಿ ಉತ್ಸವದ ನಿಮಿತ್ತ ಪ್ರಭಾತಪೇರಿ ನಡೆಯಿತು. 
ಜಿಲ್ಲೆ

ಉಮರಜದಲ್ಲಿ ನವರಾತ್ರಿ ನಿಮಿತ್ತ ಪ್ರಭಾತಪೇರಿ

Vijayapura - Desk - Chinnayya Chinnayyanamath

ರೇವತಗಾಂವ: ನವರಾತ್ರಿ ಅಂಗವಾಗಿ ಶನಿವಾರ ಗ್ರಾಮದಲ್ಲಿ ಅಂಭಾಭವಾನಿ ದೇವಾಸ್ಥಾನದಿಂದ ಪ್ರಭಾತಪೇರಿ ಆರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು.

ಗಡಿಗ್ರಾಮ ಉಮರಜದಲ್ಲಿ ನವರಾತ್ರಿ ಉತ್ಸವ ಅತ್ಯಂತ ವಿಶಿಷ್ಟವಾಗಿ ನಡೆಯುತ್ತಿದೆ. ಕಳೆದ 68 ವರ್ಷಗಳಿಂದಲೂ ಇಲ್ಲಿ ನಾಡಹಬ್ಬವನ್ನು ಕನ್ನಡ ಭಾಷಾಭಿಮಾನ ಸಮೂಡಿಸುವ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿದೆ.

ನವರಾತ್ರಿ ನಿಮಿತ್ತ ಉಮರಜ ಗ್ರಾಮದಲ್ಲಿ ನಾಡು-ನುಡಿ ಹಬ್ಬದ ಸಂಭ್ರಮ ಮನೆ ಮಾಡಿದೆ. ನವರಾತ್ರಿ ಸಂಪನ್ನವಾಗುವವರೆಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾಡದೇವಿಯ ಪ್ರಭಾತ ಪೇರಿ ನಡೆಯುತ್ತದೆ. ಮಕ್ಕಳು ರಾಷ್ಟ್ರಧ್ವಜ ಹಿಡಿದು ದೇಶಭಕ್ತಿಯ ಭಾವನೆಯೊಂದಿಗೆ ಪ್ರಭಾತಪೇರಿಯಲ್ಲಿ ಸಾಗಿದರು.