ಜಿಲ್ಲೆ

ಸೇವಾ ಸಂಸ್ಥೆ ಕಾರ್ಯ ಶ್ಲಾಘನೀಯ: ಶಾಸಕ ಉಮಾನಾಥ ಕೋಟ್ಯಾನ್ ಹೇಳಿಕೆ

ಹಳೆಯಂಗಡಿ: ಸೇವಾ ಸಂಸ್ಥೆಗಳು ಸಾಮಾಜಿಕ ಕಳಕಳಿ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಮೂಲಸೌಕರ್ಯ ಒದಗಿಸಿ ಮುಖ್ಯವಾಹಿನಿಗೆ ಕರೆ ತರಲು ವಹಿಸುತ್ತಿರುವ ಶ್ರಮ ಶ್ಲಾಘನೀಯ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಹಳೆಯಂಗಡಿ ಯುವತಿ ಮಂಡಲ, ಮಹಿಳಾ ಮಂಡಲದ ನವೀಕೃತ ಕಟ್ಟಡಕ್ಕೆ ಭೇಟಿ ನೀಡಿ ಶುಭ ಹಾರೈಸಿದರು. ಮಹಿಳಾ ಮಂಡಲ ಅಧ್ಯಕ್ಷೆ ರೇಷ್ಮಾ ಅಶ್ರ್, ಕಾರ್ಯದರ್ಶಿ ಪ್ರೇಮಲತಾ ಯೋಗೀಶ್, ಯುವತಿ ಮಂಡಲ ಕಾರ್ಯದರ್ಶಿ ದಿವ್ಯಶ್ರೀ ಕೋಟ್ಯಾನ್, ಾತಿಮಾ, ಮಹಿಳಾ ಮಂಡಲ ಕೋಶಾಧಿಕಾರಿ ರಾಜೇಶ್ವರಿ ರಾಮನಗರ, ಜತೆ ಕಾರ್ಯದರ್ಶಿ ಸುಲೋಚನಿ ಮಹಾಬಲ, ಇಂದಿರಾ ಜಗದೀಶ್, ಚಂಪ, ಸಲಹಾ ಸಮಿತಿ ಸದಸ್ಯ ಪಾವಂಜೆ ಜಗದೀಶ್ ಪಲಿಮಾರ್ ಉಪಸ್ಥಿತರಿದ್ದರು.