BHUVANESHWARI 
ಜಿಲ್ಲೆ

ಸಿಇಟಿಯಲ್ಲಿ ಉಮಾಮಹೇಶ್ವರಿ ಉತ್ತಮ ಸಾಧನೆ *ಬಡ ರೈತನ ಮಗಳು ರಾಜ್ಯಕ್ಕೆ 3ನೇ ರ‌್ಯಾಂಕ್

ಲಿಂಗಸೂಗೂರು ಸಿಇಟಿ ಪರೀಕ್ಷೆಯಲ್ಲಿ ಪಟ್ಟಣದ ಉಮಾಮಹೇಶ್ವರಿ ಪದವಿ ಪೂರ್ವ ಕಾಲೇಜು ಉತ್ತಮ ಸಾಧನೆ ಮಾಡಿದ್ದು, ಬಡ ರೈತರನ ಮಗಳು ಭುವನೇಶ್ವರಿ ಪಶುವೈಧ್ಯಕೀಯದಲ್ಲಿ ರಾಜ್ಯಕ್ಕೆ 3ನೇ ರ‌್ಯಾಂಕ್ ಹಾಗೂ ಕೃಷಿ ವಿಜ್ಞಾನದಲ್ಲಿ 7ನೇ ರ‌್ಯಾಂಕ್ ಪಡೆದಿದ್ದಾರೆ.

ಕಾಲೇಜಿನಿಂದ ಪ್ರತಿ ವರ್ಷ 300 ಕ್ಕೂ ಅಧಿಕ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದು ಶೇ.70 ರಷ್ಟು ವಿದ್ಯಾರ್ಥಿಗಳು ಉತ್ತಿರ್ಣರಾಗಿ ವೈದ್ಯಕೀಯ, ಇಂಜಿನಿಯರಿಂಗ್,ಪಶು ವೈದ್ಯಾಕೀಯಬ ಸೇರಿದಂತೆ ವಿವಿಧ ವೃತ್ತಪರ ಕೋರ್ಸ್‌ಗಳಲ್ಲಿ ಪ್ರವೇಶ ಪಡೆದು ವೃತ್ತಿ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ.

ಆದರಂತೆ ಪ್ರಸಕ್ತ ಸಾಲಿನಲ್ಲಿ ಕಾಲೇಜಿನಿಂದ ಒಟ್ಟು 370 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲರು ಅರ್ಹತೆ ಪಡೆದಿದ್ದಾರೆ. ಈ ಪೈಕಿ ಪಶು ವೈದ್ಯಕೀಯ ಕ್ಷೇತ್ರದಲ್ಲಿ ಭುವನೇಶ್ವರಿ 3ನೇ ರ‌್ಯಾಂಕ್,ವೀರೇಶ 44 ನೇ ರ‌್ಯಾಂಕ್,ಅಂಜನೇಯ 49 ನೇ ರ‌್ಯಾಂಕ್, ಪರಶುರಾಮ76ನೇ ರ‌್ಯಾಂಕ್ , ಅಭಿಷೇಕ ಐದನಾಳ 267ನೇ ರ‌್ಯಾಂಕ್, ಮಂಜುನಾಥ 281ನೇ ರ‌್ಯಾಂಕ್, ಶ್ರೇಯಾ 282ನೇ ರ‌್ಯಾಂಕ್, ಆಂಜನೇಯ 284ನೇ ರ‌್ಯಾಂಕ್, ಮನೋಜ್ ಕುಮಾರ 285ನೇ ರ‌್ಯಾಂಕ್, ಅನಿಲ 392ನೇ ರ‌್ಯಾಂಕ್ , ಶರಣಬಸವ ಆಲ್ಕೋಡ 398ನೇ ರ‌್ಯಾಂಕ್, ದೊಡ್ಡಬಸವ 400ನೇ ರ‌್ಯಾಂಕ್, ಶಿವಕುಮಾರ.ಎನ್ 549ನೇ ರ‌್ಯಾಂಕ್, ಶ್ವೇತಾ 690ನೇ ರ‌್ಯಾಂಕ್, ಶ್ರೀದೇವಿ 748ನೇ ರ‌್ಯಾಂಕ್, ರಾಜ ಮಹಮ್ಮದ್ 848ನೇ ರ‌್ಯಾಂಕ್ , ವಾಸುಕಿ ಪೇರಿ 907ನೇ ರ‌್ಯಾಂಕ್, ಸೃಜನಕುಮಾರಸ್ವಾಮಿ 922ನೇ ರ‌್ಯಾಂಕ್, ಮೌನೇಶ 999ನೇ ರ‌್ಯಾಂಕ್, ಸಂಜನ 1179ನೇ ರ‌್ಯಾಂಕ್ ಪಡೆದಿದ್ದಾರೆ.

ನಮ್ಮ ಕಾಲೇಜಿನ ವಿದ್ಯಾರ್ಥಿನಿ ಭುವನೇಶ್ವರಿ ಬಡತನವನ್ನು ಲೆಕ್ಕೆಸದೆ ಪಶುವೈಧ್ಯಕೀಯದಲ್ಲಿ ರಾಜ್ಯಕ್ಕೆ 3ನೇ ರ‌್ಯಾಂಕ್ ಹಾಗೂ ಕೃಷಿ ವಿಜ್ಞಾನದಲ್ಲಿ 7ನೇ ರ‌್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾಳೆ. ನಮ್ಮ ಕಾಲೇಜಿನ ಬಡ ವಿದ್ಯಾರ್ಥಿಗಳಿಗೆ ನಾವು ಯಾವಾಗಲು ಬೆನ್ನೆಲುಬಾಗಿ ಹಿಂದೆ ಇರುತ್ತೇವೆ. ಜತೆಗೆ ಉನ್ನತ ವ್ಯಾಸಂಗಕ್ಕೆ ಸಂಸ್ಥೆಯಿಂದ ಸಹಾಯ ಮಾಡುತ್ತೇವೆ.

ವಿನಾಯ ಗಣಚಾರಿ ಆಡಳಿತಾಧಿಕಾರಿ ಉಮಾಮಹೇಶ್ವರಿ ಕಾಲೇಜು ಲಿಂಗಸೂಗೂರು.