ತಿ.ನರಸೀಪುರ ತಾಲೂಕಿನ ತುಂಬಲ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಉಮಾ ಮಂಗಳವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡರು. ಪಿ.ಎಂ.ಸುಲೋಚನಾ ಗುರುರಾಜು, ಸರಸ್ವತಿ, ಅಂದಾನಿ, ಮಂಜುನಾಥ್, ಸುರೇಶ್, ಸಿದ್ದರಾಜು ಇದ್ದಾರರು ಇದ್ದರು. 
ಜಿಲ್ಲೆ

ತುಂಬಲ ಗ್ರಾಪಂ ಉಪಾಧ್ಯಕ್ಷರಾಗಿ ಉಮಾ ಅವಿರೋಧ ಆಯ್ಕೆ

ತಿ.ನರಸೀಪುರ: ತಾಲೂಕಿನ ತುಂಬಲ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಉಮಾ ಮಂಗಳವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.

ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿದ್ದ ಸರಸ್ವತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಪಂಚಾಯಿತಿಯ ಸಭಾಂಗಣದಲ್ಲಿ ಚುನಾವಣೆ ನಿಗದಿಯಾಗಿತ್ತು. ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಉಮಾ ಅವರೋಬ್ಬರೇ ನಾಮಪತ್ರ ಸಲ್ಲಿಸಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ರಾಮಾಂಜಯ ಅವರು ಚುನಾವಣೆ ಸಭೆಗೆ ಗೈರು ಹಾಜರಾಗಿದ್ದರಿಂದ ಪಂಚಾಯಿತಿಯ 13 ಸದಸ್ಯರಲ್ಲಿ 12 ಸದಸ್ಯರು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಚುನಾವಣೆ ಅಧಿಕಾರಿಯಾಗಿ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಕರ್ತವ್ಯ ನಿರ್ವಹಿಸಿದರು.

ನೂತನ ಉಪಾಧ್ಯಕ್ಷ ಉಮಾ ಮಾತನಾಡಿ, ಅವಿರೋಧವಾಗಿ ಆಯ್ಕೆಯಾಗಲು ಸಹಕಾರ ನೀಡಿದ ಪಂಚಾಯಿತಿಯ ಸದಸ್ಯರ ಜತೆ ಅಭಿವೃದ್ಧಿಗಾಗಿ ದುಡಿಯುತ್ತೇನೆ. ಕಾಂಗ್ರೆಸ್ ವರಿಷ್ಠರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತು ಎಂಎಲ್ಸಿ ಡಾ.ಯತೀಂದ್ರ ಸಿದ್ರಾಮಯ್ಯ ಅವರಿಂದ ಅಭಿವೃದ್ಧಿಗೆ ನೆರವು ನೀಡಲು ಕೋರುತ್ತೇನೆ ಎಂದರು.

ತಾ.ಪಂ. ಮಾಜಿ ಅಧ್ಯಕ್ಷ ಅಂದಾನಿ ಮಾತನಾಡಿ, ತುಂಬಲ ಗ್ರಾಮ ಪಂಚಾಯಿತಿಯು ಸಿದ್ದರಾಮಯ್ಯ ಶಾಸಕರಾಗಿ ಪ್ರತಿನಿಧಿಸುವ ವರಣ ಕ್ಷೇತ್ರದ ವ್ಯಾಪ್ತಿಗೆ ಬರಲಿದ್ದು, ಅವರ ಮಾರ್ಗದಲ್ಲಿ ನಾವೆಲ್ಲರೂ ಕೆಲಸ ಮಾಡುತ್ತೇವೆ. ಈಗಾಗಲೇ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದು ಪಂಚಾಯಿತಿಯನ್ನು ಮಾದರಿ ಪಂಚಾಯಿತಿಯಾಗಿ ಮಾಡುತ್ತೇವೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಪದ್ಮಾ, ಬಸವರಾಜು, ರತ್ನಮ್ಮ, ಅನಿತಾ, ಶೇಖರ್, ಕಂಬಯ್ಯ, ಸತೀಶ್, ಚಂದ್ರಶೇಖರ್, ಪಿ.ಎಂ.ಸುಲೋಚನಾ ಗುರುರಾಜು, ಮಣಿಯಮ್ಮ, ಅಭಿವೃದ್ಧಿ ಅಧಿಕಾರಿ ಧನಂಜಯ, ತಾ.ಪಂ. ಮಾಜಿ ಅಧ್ಯಕ್ಷ ಅಂದಾನಿ, ದಲಿತ ಜಾಗೃತಿ ಸಮಿತಿಯ ಜಿಲ್ಲಾಧ್ಯಕ್ಷ ಮಂಜುನಾಥ್, ಮುಖಂಡರಾದ ಗುರುರಾಜು, ಸುರೇಶ್, ಸಿದ್ದರಾಜು, ಸೋಮನಾಥಪುರ ಗಣೇಶ್, ಮಲ್ಲಿಕಾ, ಮಹೇಶ್, ನಿರಂಜನ್, ಬಸವರಾಜು ಹಾಗೂ ಇತರರು ಇದ್ದರು.