ಜಿಲ್ಲೆ

ಉಳುವರೆಯ 27 ಕುಟುಂಬಗಳು ದೇವಿಗದ್ದೆ ಗ್ರಾಮಕ್ಕೆ ಸ್ಥಳಾಂತರ

Uttara Kannada - Subash Hegde

ಕಾರವಾರ: ಶಿರೂರು ಗುಡ್ಡ ಕುಸಿತದಿಂದ ಬಾಧಿತ ಅಂಕೋಲಾ ತಾಲೂಕಿನ ಉಳುವರೆ ಗ್ರಾಮದ 27 ಕುಟುಂಬಗಳನ್ನು ಸ್ಥಳಾಂತರಿಸಲು ದೇವಿಗದ್ದೆ ಗ್ರಾಮದಲ್ಲಿ 38 ಗುಂಟೆ ಜಾಗ ಗುರುತಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು.
ಕಾರವಾರ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ 78 ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಶಿರೂರು ಗುಡ್ಡ ಕುಸಿತದಲ್ಲಿ ಮೃತರ ಆತ್ಮಕ್ಕೆ ಶಾಂತಿ ಕೋರಿ, ಮೌನ ಆಚರಿಸಲಾಯಿತು. ಉಳುವರೆ ಗ್ರಾಮಸ್ಥರಿಗೆ ಸರ್ಕಾರದ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡಲಾಗುವುದು ಎಂದರು.

ಅಂಗಾಂಗ ದಾನ ಮಾಡಿದ ರಾಘವೇಂದ್ರ ಗಾಣಿಗ ಹಾಗೂ ತರುಣ ಬಾಲಚಂದ್ರ ಮಡಿವಾಳ ಅವರ ಸಂಬಂಧಿಕರನ್ನು ಸನ್ಮಾನಿಸಲಾಯಿತು. ಶಿರೂರು ಗುಡ್ಡ ಕುಸಿತ, ಕಾಳಿ ಸೇತುವೆ ಕುಸಿತದ, ನೆರೆಯ ಸಂದರ್ಭದಲ್ಲಿ ಕಾರ್ಯಾಚರಿಸಿದ ಕುಮಟಾ, ಕಾರವಾರ ಎಸಿಗಳಾದ ಕಲ್ಯಾಣಿ ಕಾಂಬಳೆ, ನಯನಾ ಎಸ್., ಕಾರವಾರ ತಹಸೀಲ್ದಾರ್ ಎನ್.ಎಫ್.ನರೋನಾ, ಕಾರವಾರ ತಾಪಂ ಇಒ ಆನಂದಕುಮಾರ್ ಬಾಲಪ್ಪನವರ್, ಕಂದಾಯ ನಿರೀಕ್ಷಕ ಪ್ರಶಾಂತ ಡಿ.ನಾಯ್ಕ, ಮಿನುಗಾರರಾದ ಸೂರಜ್ ಗೋಪಿನಾಥ ಸಾರಂಗ ರಾಜೇಂದ್ರ ನಾವಗೆ, ಕಾರವಾರ ಡಿವೈಎಸ್ ಪಿ ಗಿರೀಶ ಎಸ್.ವಿ., ಭಟ್ಕಳ ಡಿವೈಎಸ್ ಪಿ ಮಹೇಶ ಎಂ.ಕೆ., ಅಂಕೋಲಾ ಇನ್ಸ್ಪೆಕ್ಟರ್ ಶ್ರೀಕಾಂತ ತೊಟಗಿ, ಚಿತ್ತಾಕುಲಾ ಪಿರಸ್ಐ ಮಹಾಂತೇಶ ವಾಲ್ಮೀಕಿ, ಗೋಕರ್ಣ ಎಎಸ್ಐ ನಿರಂಜನ ನಾಯ್ಕ, ಸಿಎಚ್ ಸಿ ರಾಜೇಶ ಎಚ್.ನಾಯ್ಕ, ಅಂಕೋಲಾ ಠಾಣೆಯ ಸಿಎಚ್ ಚಂದ್ರಕಾಂತ ಗೌಡ, ಕರಾವಳಿ ಕಾವಲುಪಡೆ ತಾಂತ್ರಿಕ ಸಿಬ್ಬಂದಿ ಅಶೋಕ ದುರ್ಗೇಕರ್, ಚಿತ್ತಾಕುಲಾ ಸಿಬ್ಬಂದಿಗಳಾದ ವಿನಯ ಕಾಣಕೋಣಕರ್, ಪುನೀತ ನಾಯ್ಕ, ಕರಾವಳಿ ಕಾವಲು ಪಡೆಯ ಸುದರ್ಶನ ತಾಂಡೇಲ, ಅವರನ್ನು ಸನ್ಮಾನಿಸಲಾಯಿತು‌. ಅಲ್ಲದೇ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು.
ಆರ್ ಪಿಐ ಫಕೀರಪ್ಪ ಆರ್ ಡಕ್ಕಣ್ಣನವರ್ ನೇತೃತ್ವದಲ್ಲಿ 16 ತುಕಡಿಗಳ ಆಕರ್ಷಕ ಪಥ ಸಂಚಲನ ಗಮನ ಸೆಳೆಯಿತು‌.‌ ಸದಾಶಿವಗಡದ ಸೆಕ್ರೆಡ್ ಹಾರ್ಟ್, ಕಾರವಾರದ ಬಾಲ ಮಂದಿರ ಶಾಲೆಗಳ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಗಮನ ಸೆಳೆಯಿತು.