ಜಿಲ್ಲೆ

ಅಕ್ರಮ ಮರಳು ದಾಸ್ತಾನು ಪತ್ತೆ

ಹರೀಶ ಎಂ.

ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮನ್ನೂರು ಗ್ರಾಮದ ಕಲ್ಲಾಪು ಮತ್ತು ಉಳ್ಳಾಲ ಗ್ರಾಮದ ಕೋಟೆಪುರ ಎಂಬಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಮತ್ತು ಸಾಗಾಟ ಮಾಡುತ್ತಿರುವುದನ್ನು ಉಳ್ಳಾಲ ಪೊಲೀಸರು ಗುರುವಾರ ಬೆಳಗ್ಗೆ ಪತ್ತೆ ಮಾಡಿದ್ದಾರೆ.


ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಕೋಟೆಪುರ ಎಂಬಲ್ಲಿ ನೇತ್ರಾವತಿ ದಡದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 12 ಲೋಡ್ ಸಾಮಾನ್ಯ ಮರಳನ್ನು ಪತ್ತೆ ಮಾಡಿ ಕಾನೂನು ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ವರದಿ ಸಲ್ಲಿಸಿದ್ದಾರೆ.