ಉಳ್ಳಾಲ: ಉಳ್ಳಾಲ ನಗರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಶಶಿಕಲಾ ಹಾಗೂ ಉಪಾಧ್ಯಕ್ಷರಾಗಿ ಸಪ್ನಾ ಹರೀಶ್ ಆಯ್ಕೆಯಾಗಿದ್ದಾರೆ.
31 ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್ 13, ಬಿಜೆಪಿ 6, ಎಸ್‌ಡಿಪಿಐ 6, ಜೆಡಿಎಸ್ 4, ಪಕ್ಷೇತರ 2 ಸ್ಥಾನ ಹೊಂದಿದ್ದಾರೆ. ಅಧ್ಯಕ್ಷ ಸ್ಥಾನ ಎಸ್ಸಿ ಮತ್ತು ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಶಶಿಕಲಾ, ಬಿಜೆಪಿಯಿಂದ ಭವಾನಿ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಸಪ್ನಾ ಹರೀಶ್, ಬಿಜೆಪಿಯಿಂದ ನಮಿತಾ ಗಟ್ಟಿ ಹಾಗೂ ಎಸ್‌ಡಿಪಿಐನಿಂದ ಝರೀನ ರವೂಫ್ ಸ್ಪರ್ಧಿಸಿದ್ದರು. ಶಶಿಕಲಾ ಅವರಿಗೆ ಸ್ವಪಕ್ಷದ 13, ಎಸ್‌ಡಿಪಿಐನ 6, ಜೆಡಿಎಸ್‌ನ 2 ಮತ್ತು ಇಬ್ಬರು ಪಕ್ಷೇತರರ ಮತ ಸಹಿತ ಒಟ್ಟು 23 ಮತಗಳು ಲಭಿಸಿದವು. ಬಿಜೆಪಿಯ ಭವಾನಿ ಅವರಿಗೆ ಸ್ವಪಕ್ಷದ 6 ಮತಗಳು ಲಭಿಸಿದವು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಸಪ್ನಾ ಹರೀಶ್‌ಗೆ ಸ್ವಪಕ್ಷದ 13, ಪಕ್ಷೇತರ ಮತ್ತು ಜೆಡಿಎಸ್ ತಲಾ 2 ಮತಗಳ ಸಹಿತ ಒಟ್ಟು 17, ಬಿಜೆಪಿಯ ನಮಿತಾ ಗಟ್ಟಿ ಮತ್ತು ಎಸ್‌ಡಿಪಿಐನ ಝರೀನಾ ರವೂಫ್‌ಗೆ ತಲಾ 6 ಮತಗಳು ಲಭಿಸಿದವು. ಜೆಡಿಎಸ್‌ನ ದಿನಕರ್ ಉಳ್ಳಾಲ್ ಮತ್ತು ಬಶೀರ್ ತಟಸ್ಥರಾಗಿದ್ದರು.