ಮಂಗಳೂರು : ಉಳ್ಳಾಲ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್, ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್, ಸಹಯೋಗದಲ್ಲಿ ಉಳ್ಳಾಲದ ಮಹಾತ್ಮ ಗಾಂಧಿ ಮೈದಾನದಲ್ಲಿ ಜರಗಿದ ತಾಲೂಕು ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಶ್ರೀ ವಿದ್ಯಾಂಜನೇಯ ವ್ಯಾಯಾಮ ಶಾಲಾ ತಂಡ ಪ್ರಥಮ ಪ್ರಶಸ್ತಿ ಪಡೆಯಿತು.
ದೇವಿಪುರ ದುರ್ಗಾ ಪರಮೇಶ್ವರಿ ತಂಡ ದ್ವಿತೀಯ , ತತ್ವಮಸಿ ತಂಡ ಬಗಂಬಿಲ ತಂಡ ತೃತೀಯ ಹಾಗೂ ಫ್ರೆಂಡ್ಸ್ ದೇವೀನಗರ ತಂಡ ಚತುರ್ಥ ಸ್ಥಾನ ಪಡೆದವು. ಉಳ್ಳಾಲ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ವಿಜೇತ ತಂಡಗಳಿಗೆ ಟ್ರೋಫಿ ವಿತರಿಸಿದರು.
ಕಬಡ್ಡಿ ಅಸೋಸಿಯೇಷನ್‌ನ ಜಿಲ್ಲಾ ಉಪಾಧ್ಯಕ್ಷ ಕೆ.ಟಿ ಸುವರ್ಣ, ಗೌರವ ಸಲಹೆಗಾರ ರತನ್ ಕುಮಾರ್ ಶೆಟ್ಟಿ, ಉದ್ಯಮಿ ಚಂದ್ರಹಾಸ ಶೆಟ್ಟಿ, ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಮೊಕ್ತೇಸರ ಚಂದ್ರಹಾಸ ಅಡ್ಯಂತಾಯ, ಮಾಡೂರಿನ ಶಿರಡಿ ಸಾಯಿ ಮಂದಿರದ ಸ್ಥಾಪಕ ಸುರೇಶ್ ಕೆ.ಪಿ, ಉದ್ಯಮಿ ಹರೀಶ್ ಕಾಮತ್, ಶಿವಾಜಿ ಫ್ರೆಂಡ್ಸ್ ಸರ್ಕಲ್ ತೊಕ್ಕೊಟ್ಟು ಅಧ್ಯಕ್ಷ ಮಾಧವ ಗಟ್ಟಿ, ರಘುರಾಮ ಶೆಟ್ಟಿ, ಸಾಜಿದ್ ಉಳ್ಳಾಲ, ಸಿರಿಲ್ ರಾಬರ್ಟ ಡಿಸೋಜಾ, ಹರೀಶ್ ಕುಮಾರ್ ಬಸ್ತಿಪಡ್ಪು, ವಿದ್ಯಾಂಜನೇಯ ವ್ಯಾಯಾಮ ಶಾಲೆಯ ಅಧ್ಯಕ್ಷ ಚಂದ್ರಹಾಸ, ಪ್ರವೀಣ್ ಕುಂಪಲ ಉಪಸ್ಥಿತರಿದ್ದರು.