ಕುಕನೂರಿನಲ್ಲಿ ಕೋರೆಂಗಾವ್ ವಿಜಯೋತ್ಸವ ಅಂಗವಾಗಿ ವಿಜೃಂಭಣೆಯಿಂದ ಮೆರವಣಿಗೆ ನಡೆಯಿತು. ಪ್ರಮುಖರಾದ ರಾಮಣ್ಣ ಬಂಕದಮನಿ, ಶರಣಪ್ಪ ಕಾಳಿ, ಪಕ್ಕಪ್ಪ ಸಾಲಮನಿ, ಯಲ್ಲಪ್ಪ ಕಲ್ಮನಿ, ಲಕ್ಷ್ಮಣ ಕಾಳಿ, ರಾಘು ಕಾತರಕಿ ಇದ್ದರು. 
ಜಿಲ್ಲೆ

ಕುಕನೂರಿನಲ್ಲಿ ಕೋರೆಂಗಾವ್ ವಿಜಯೋತ್ಸವ

ಪ್ರವೀಣ ಉದುಸಾ ದಲಬಂಜನ್

ಕುಕನೂರು: ಕೋರೆಂಗಾವ್ ವಿಜಯೋತ್ಸವ ಅಂಗವಾಗಿ ಪಟ್ಟಣದಲ್ಲಿ ಅದ್ದೂರಿಯಾಗಿ ಮೆರವಣಿಗೆ ಸೋಮವಾರ ನಡೆಯಿತು.

ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದ ಯುವಕರು

ಪ್ರಮುಖರು ಡಾ. ಬಿ.ಅಂಬೇಡ್ಕರ್ ವೃತ್ತಕ್ಕೆ ಮಾಲಾರ್ಪಣೆ ಸಲ್ಲಿಸಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕೋರಂಗಾವ್ ವಿಜಯೋತ್ಸವ ಮೆರವಣಿಗೆ ಸಾಗಿತು. ಡಿಜೆ ಸೌಂಡ್‌ಗೆ ಯುವಕರು ಕುಣಿದು ಕುಪ್ಪಳಿಸಿದರು. ದಾರಿಯುದ್ದಕ್ಕೂ ಜಯಘೋಷಗಳನ್ನು ಕೂಗಿದರು. ಪ್ರಮುಖರಾದ ರಾಮಣ್ಣ ಬಂಕದಮನಿ, ಶರಣಪ್ಪ ಕಾಳಿ, ಪಕ್ಕಪ್ಪ ಸಾಲಮನಿ, ಯಲ್ಲಪ್ಪ ಕಲ್ಮನಿ, ಲಕ್ಷ್ಮಣ ಕಾಳಿ, ರಾಘು ಕಾತರಕಿ, ನಾಗಪ್ಪ ಕಲ್ಮನಿ, ಗವಿಸಿದ್ದಪ್ಪ ಚಲವಾದಿ, ರಾಜೇಶ ಕಾತರಕಿ, ಗುದ್ನೆಪ್ಪ ಬಂಕದಮನಿ, ವೆಂಕಟೇಶ್, ವೀರೇಶ ಬಂಕದಮನಿ, ರಾಘು, ಉಮೇಶ ಇತರರಿದ್ದರು.