ಉಜ್ಜಿನಿ: ಲಿಂ.ಶ್ರೀ ಸಿದ್ಧಲಿಂಗ ಜಗದ್ಗುರುಗಳ ಸ್ಮರಣೆಯಿಂದ ಕಷ್ಟಗಳು ಪರಿಹಾರವಾಗಲಿವೆ ಎಂದು ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯರು ಹೇಳಿದರು.
ಉಜ್ಜಿನಿ ಸದ್ಧರ್ಮ ಪೀಠದಲ್ಲಿ ಲಿಂ.ಶ್ರೀ ಸಿದ್ಧಲಿಂಗ ಜಗದ್ಗುರುಗಳ ಪುರಾಣ ಮಂಗಲ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶುಕ್ರವಾರ ಆಶೀರ್ವಚನ ನೀಡಿದರು. ಲಿಂ.ಸಿದ್ಧಲಿಂಗ ಜಗದ್ಗುರುಗಳು ಹೊರ ರಾಜ್ಯಗಳಲ್ಲಿ ಸಂಚರಿಸಿ ಧರ್ಮ ಜಾಗೃತಿ ಮೂಡಿಸಿ ಅಭಿಮಾನ ಬೆಳೆಸುವಂತೆ ಮಾಡಿದರು. ಅವರ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿದ್ದರು. ಅಲ್ಲದೆ ತಪಸ್ಸು ಮಾಡಿ ಪವಾಡ ಪುರುಷ ಮಹಾ ತಪಸ್ವಿ ಎನಿಸಿಕೊಂಡರು. ಅವರು ಪೀಠಕ್ಕೆ ದೊಡ್ಡ ಶಕ್ತಿಯಾಗಿದ್ದಾರೆ ಎಂದರು.
ಇದನ್ನೂ ಓದಿ: ಸಕ್ಕರೆ ಕಾರ್ಖಾನೆಗಳು 400 ರೂ. ನೀಡಲಿ
ಮಕ್ಕಳು ಪಾಲಕರ ಮನಸ್ಸನ್ನು ನೋಯಿಸಬಾರದು. ಗುರು-ಹಿರಿಯರಿಗೆ ಗೌರವ ಕೊಡುವ ಗುಣ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ಕಲ್ಯಾಣ ಶಿವಾಚಾರ್ಯ ಸ್ವಾಮೀಜಿ, ತೆರಿಗೆ ಸಲಹೆಗಾರ ವೀರೇಶ್, ಪುರಾಣ ಪ್ರವಚನಕಾರ ಪಂ. ಪುಟ್ಟರಾಜ ಶಾಸ್ತ್ರಿ ಹಿರೇಮಠ, ಪೀಠದ ವ್ಯವಸ್ಥಾಪಕ ವೀರೇಶ್, ಕುರುಗೋಡು ಸಿದ್ದೇಶ್, ಬಂಗಾರಿ ಶಿವಣ್ಣ, ಸದ್ಧರ್ಮ ಹಿರಿಯ ನಾಗರಿಕರ ಸಂಘದ ಚನ್ನವೀರಸ್ವಾಮಿ, ಸಂಗೀತ ಕಲಾವಿದರಾದ ವಾಗೀಶಯ್ಯ, ಸಂತೋಷ್ ಕುಮಾರ್, ಸಿದ್ದಲಿಂಗಯ್ಯ, ಯು.ಎಂ.ವೀರಪ್ಪಯ್ಯ, ನಿವೃತ್ತ ಶಿಕ್ಷಕ ಜೋಷಿ ಇದ್ದರು. ಹಂಸಪ್ರಿಯ ನೃತ್ಯ ನಿಕೇತನ ನಾಟ್ಯ ಶಾಲೆ ತಂಡದಿಂದ ಭರತನಾಟ್ಯ ಪ್ರದರ್ಶನ ನಡೆಯಿತು.