ಉಜ್ಜಿನಿ : ಪಂಚಪೀಠಗಳಲ್ಲಿ ಒಂದಾಗಿರವ ನಾಡಿನ ಪ್ರಸಿದ್ದ ಉಜ್ಜಯಿನಿ ಶ್ರೀ ಜಗದ್ಗುರು ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ ಶುಕ್ರವಾರ ಸಂಜೆ ಅದ್ದೂರಿಯಾಗಿ ನಡೆಯಿತು.
ನಾಡಿನ ಮೂಲೆ ಮೂಲೆಗಳಿಂದ ಬಂದಿದ್ದ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ಧನ್ಯತೆ ಪಡೆದರು. ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ರಥೋತ್ಸವದ ಕಾರ್ಯಕ್ರಮದಲ್ಲಿ ಮೊದಲು ಸ್ವಾಮಿಯ ಉತ್ಸವಮೂರ್ತಿಯನ್ನು ಕರೆತಂದು ರಥಕ್ಕೆ ಪ್ರದಕ್ಷಿಣೆ ಹಾಕಿಸಿ ರಥದಲ್ಲಿ ಪ್ರತಿಷ್ಠಾನ ಮಾಡಲಾಯಿತು.
ಬಾವುಟವನ್ನು ಕೆರೆಗುಡಿಹಳ್ಳಿ ನಂದೀಶ 3.26 ಲಕ್ಷ ರೂ. ಪಡೆದರು. ಸಮಾಳ, ನಂದಿಕೋಲು ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ನೆರೆದಿದ್ದ ಲಕ್ಷಾಂತರ ಭಕ್ತರು ಜಯಘೋಷಣೆ ಕೂಗುತ್ತ ರಥವನ್ನು ಮುಂದೆ ಎಳೆದುಕೊಂಡು ಹೋದರು. ನಂತರ ಪಾದಗಟ್ಟೆ ಮುಟ್ಟಿ ಶ್ರೀ ಸ್ವಾಮಿಯ ಪೂಜೆ ಸಲ್ಲಿಸಿ ಮತ್ತೆ ಮರಳಿ ಬಂದು ನೆಲೆ ನಿಲ್ಲಿಸಲಾಯಿತು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್, ಮಾಜಿ ಸಚಿವ ಎಂಪಿ ರೇಣುಕಾಚಾರ್ಯ, ಕೂಡ್ಲಿಗಿ ಶಾಸಕ ಎನ್ ಟಿ ಶ್ರೀನಿವಾಸ, ಜಗಳೂರು ಶಾಸಕ ದೇವೇಂದ್ರಪ್ಪ ಇತರರಿದ್ದರು.