ಬೆಳ್ತಂಗಡಿ: ಉಜಿರೆ ಎಸ್‌ಡಿಎಂ ಪದವಿಪೂರ್ವ ಕಾಲೇಜು ಈ ಬಾರಿಯ ಪಿಯುಸಿ ಪದರೀಕ್ಷೆಯಲ್ಲಿ ಶೇ.97.27 ಫಲಿತಾಂಶ ದಾಖಲಿಸಿದೆ.
ವಿಜ್ಞಾನ ವಿಭಾಗದಲ್ಲಿ 624 ವಿದ್ಯಾರ್ಥಿಗಳ ಪೈಕಿ 606 ಮಂದಿ ಉತ್ತೀರ್ಣರಾಗಿದ್ದು, 162 ಮಂದಿ ಡಿಸ್ಟಿಂಕ್ಷನ್ ಪಡೆದಿದ್ದಾರೆ. 411 ಮಂದಿಗೆ ಪ್ರಥಮ ಶ್ರೇಣಿ, 32 ಮಂದಿ ದ್ವಿತೀಯ ಹಾಗೂ ಓರ್ವ ವಿದ್ಯಾರ್ಥಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ತುಷಾರಾ ಬಿ.ಎನ್. 595 ಅಂಕಗಳೊಂದಿಗೆ ಮೂಲಕ ರಾಜ್ಯಕ್ಕೆ ಐದನೇ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 365 ವಿದ್ಯಾರ್ಥಿಗಳ ಪೈಕಿ 357 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 107 ಮಂದಿಗೆ ಡಿಸ್ಟಿಂಕ್ಷನ್ ಲಭಿಸಿದೆ. 216 ಪ್ರಥಮ ಶ್ರೇಣಿ, 30 ದ್ವಿತೀಯ ಶ್ರೇಣಿ ಹಾಗೂ 4 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 593 ಅಂಕ ಗಳಿಸಿರುವ ಆರ್ಯ ದಿನೇಶ್ ರಾಜ್ಯಕ್ಕೆ 7ನೇ ಸ್ಥಾನ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ 110 ವಿದ್ಯಾರ್ಥಿಗಳಲ್ಲಿ 106 ಮಂದಿ ಉತ್ತೀರ್ಣರಾಗಿದ್ದಾರೆ. 19 ಡಿಸ್ಟಿಂಕ್ಷನ್, 57 ಮಂದಿ ಪ್ರಥಮ, 23 ವಿದ್ಯಾರ್ಥಿಗಳು ದ್ವಿತೀಯ ಹಾಗೂ 7 ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶ್ರೇಯಾ ಎಚ್.ಎ. 595 ಅಂಕಗಳೊಂದಿಗೆ ರಾಜ್ಯಕ್ಕೆ ಒಂಬತ್ತನೇ ಸ್ಥಾನ ಪಡೆದಿದ್ದಾರೆ.