ಜಿಲ್ಲೆ

ಮೇ.19ರಂದು ಮಂಡ್ಯ ನಗರದಲ್ಲಿ ಉದ್ಯೋಗ ಮೇಳ

ಕೆ.ಎನ್.ರಾಘವೇಂದ್ರ

ಮಂಡ್ಯ: ಮೆ.ಬಿ.ಜೆಡ್ ಫಿನ್ಸರ್ವ್ ಪ್ರೈ ಲಿ ವತಿಯಿಂದ ಪಿ.ಯು.ಸಿ ಮತ್ತು ಯಾವುದೇ ಪದವಿಯಲ್ಲಿ ಉತ್ತೀರ್ಣರಾದ ಮಹಿಳಾ ಅಭ್ಯರ್ಥಿಗಳಿಗೆ ಮೇ.19 ರಂದು ನಗರದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ.
ಸಂದರ್ಶನ ಬೆಳಗ್ಗೆ 10 ಗಂಟೆ ಪ್ರಾರಂಭವಾಗುತ್ತದೆ. ಅವಶ್ಯಕವಾಗಿ ಬೇಕಾಗಿರುವ ದಾಖಲೆಗಳು, 4 ಭಾವಚಿತ್ರ, ಬಯೋಡೇಟಾ ಪ್ರತಿ, ಎಸ್ಎಸ್ಎಲ್ಸಿ, ಪಿ.ಯು.ಸಿ ಅಂಕಪಟ್ಟಿ ಪ್ರತಿ, ಐ.ಟಿ.ಐ. ಅಂಕಪಟ್ಟಿ ಪ್ರತಿ, ಆಧಾರ್ ಕಾರ್ಡ್ ಪ್ರತಿ ಮತ್ತು ಪ್ಯಾನ್ ಕಾರ್ಡ್ ಪ್ರತಿಯನ್ನು ತರಬೇಕು.
ವಿವರಕ್ಕೆ ಮೊ.ಸಂ 8217803781 ಮತ್ತು ದೂ.ಸಂ 08232-295124 ಯನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಎನ್.ಆರ್ ವೇಣುಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.