ಉದ್ಯಾವರ ತೋಟ ಶಾಲೆಯಲ್ಲಿ ಚಾಂದ್ರದಿನ ಆಚರಣೆ ನಡೆಯಿತು. ಇಸ್ಮಾಯಿಲ್ ಮೀಯಪದವು, ಮುಖ್ಯಶಿಕ್ಷಕಿ ಹರಿಣಾಕ್ಷಿ ಬಿ ಮೊದಲಾದವರಿದ್ದರು. 
ಜಿಲ್ಲೆ

ಉದ್ಯಾವರ ತೋಟ ಶಾಲೆಯಲ್ಲಿ ಚಾಂದ್ರದಿನ ಆಚರಣೆ

ಸೌಮ್ಯ ಆರ್

ಮಂಜೇಶ್ವರ: ಉದ್ಯಾವರ ತೋಟ ಸರ್ಕಾರಿ ಮುಸ್ಲಿಂ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಚಾಂದ್ರದಿನದ ವಿವಿಧ ಕಾರ್ಯಕ್ರಮ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.

ಮುಖ್ಯಶಿಕ್ಷಕ ಇಸ್ಮಾಯಿಲ್ ಮೀಯಪದವು ಅಧ್ಯಕ್ಷತೆ ವಹಿಸಿದ್ದರು. ಬಡಾಜೆ ಕಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಹರಿಣಾಕ್ಷಿ ಬಿ. ಚಾಂದ್ರದಿನ ವಿಡಿಯೋ ಪ್ರದರ್ಶನ ಉದ್ಘಾಟಿಸಿದರು.

ಅಂಗನವಾಡಿ ಕಾರ್ಯಕರ್ತೆ ಪ್ರಮೀಳಾ ಶುಭಾಶಂಸನೆಗೈದರು. ಶಿಕ್ಷಕ ರವಿಶಂಕರ ನೆಗಳಗುಳಿ ಚಾಂದ್ರದಿನದ ಮಹತ್ವ ತಿಳಿಸಿದರು. ಮಕ್ಕಳಿಗೆ ರಸಪ್ರಶ್ನೆ, ರಾಕೆಟ್ ತಯಾರಿ, ಬಣ್ಣ ನೀಡುವ ವಿವಿಧ ಸ್ಪರ್ಧೆಗಳು ನಡೆಯಿತು. ವಿಜೇತ ಮಕ್ಕಳಿಗೆ ಬಹುಮಾನ ನೀಡಲಾಯಿತು. ಐಶ್ವರ್ಯ ಉಪಸ್ಥಿತರಿದ್ದರು. ಗಾಯತ್ರಿ ಟಿ.ಎನ್ ವಂದಿಸಿದರು.