ಜಿಲ್ಲೆ

ಡಾ. ಜನಾರ್ದನ ಹಾವಂಜೆಯ 'ಮೊಡೆಪು' ಪುಸ್ತಕಕ್ಕೆ ಪ್ರಶಸ್ತಿ

ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ಸನ್ಮಾನ

ವಿಜಯವಾಣಿ ಸುದ್ದಿಜಾಲ ಉಡುಪಿ

ಕರ್ನಾಟಕ ಲಲಿತಕಲಾ ಅಕಾಡೆಮಿಯು 2023-24ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಗೆ ರಾಜ್ಯದ ಕರಾವಳಿ ಭಾಗದಲ್ಲಿದ್ದ ಖ್ಯಾತ ಹಾಗೂ ಅಗಲಿದ ಕಲಾವಿದರ ಕುರಿತಾಗಿ ಕಾವಿ ಕಲಾವಿದ ಡಾ. ಜನಾರ್ದನ ರಾವ್​ ಹಾವಂಜೆ ಬರೆದಿರುವ ಮೊಡೆಪು ಪುಸ್ತಕವನ್ನು ಆಯ್ಕೆ ಮಾಡಿದೆ.

ಬೆಂಗಳೂರಿನಲ್ಲಿರುವ ಅಕಾಡೆಮಿಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ. ಗಾಯತ್ರಿ ಅವರು ಡಾ. ಜನಾರ್ದನ ಹಾವಂಜೆ ಅವರನ್ನು ಸನ್ಮಾನಿಸಿ ಗೌರವಿಸಿದರು.

ಕರ್ನಾಟಕ ಲಲಿತಕಲಾ ಅಕಾಡೆಮಿಯ ರಿಜಿಸ್ಟ್ರಾರ್​ ನೀಲಮ್ಮ, ಅಕಾಡೆಮಿಯ ಅಧ್ಯಕ್ಷ ಪ.ಸ. ಕುಮಾರ, ಕಲಾವಿದರಾದ ವಿ.ಜಿ. ವೇಣುಗೋಪಾಲ ಹಾಗೂ ಅಕಾಡೆಮಿಯ ಸದಸ್ಯರು ಉಪಸ್ಥಿತರಿದ್ದರು.

ಕರ್ನಾಟಕ ಕರಾವಳಿಯ ಹಿರಿಯ ಕಲಾವಿದರಾಗಿದ್ದ ಕೆ.ಕೆ. ಹೆಬ್ಬಾರ, ಜಿ.ಎಸ್​. ಶೆಣೈ, ಕೋಟ ಶಿವರಾಮ ಕಾರಂತ, ಕೆ.ಎಲ್​. ಭಟ್​ ಶೇವಗೂರ್​ ಸೇರಿದಂತೆ 32 ಅಗಲಿದ ಕಲಾವಿದರ ವ್ಯಕ್ತಿ ಪರಿಚಯವನ್ನು ಮೊಡೆಪು ಪುಸ್ತಕ ಒಳಗೊಂಡಿದೆ.

ಆರ್ಟ್​ ಕೆನರಾ ಸಂಸ್ಥೆಯು ಮೊಡೆಪು ಕೃತಿಯ ಪ್ರಕಾಶಕರಾಗಿದ್ದು, ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಎಲ್ಲ ಹಿರಿಯ ಕಲಾವಿದರ ಕಲಾಕೃತಿಗಳ ಪ್ರದರ್ಶನ ಮಂಗಳೂರು ಹಾಗೂ ಉಡುಪಿಯ ವಿವಿಧ ಭಾಗಗಳಲ್ಲಿ ನಡೆದಿತ್ತು. ಕಲೆಗಳ ರಕ್ಷಣೆಗೆ ಅವರ ಕೊಡುಗೆಯ ಕುರಿತು ಪುಸ್ತಕ ಮಾಹಿತಿ ನೀಡಲಿದೆ. | ಡಾ. ಜನಾರ್ದನ ರಾವ್​ ಹಾವಂಜೆ. ಕಾವಿ ಕಲಾವಿದ, ಉಡುಪಿ