ಮಂಜುನಾಥ ಪೈ 
ಉಡುಪಿ

ನೇಣು ಬಿಗಿದು ಉದ್ಯಮಿ ಆತ್ಮಹತ್ಯೆ

ದೇಗುಲಕ್ಕೆ ಭೇಟಿ ನೀಡಿ ಮರಳಿದ ಬಳಿಕ ಕೃತ್ಯ

ವಿಜಯವಾಣಿ ಸುದ್ದಿಜಾಲ ಕಾರ್ಕಳ

ಜೀವನದಲ್ಲಿ ಜಿಗುಪ್ಸೆಗೊಂಡು ನಿಮಾರ್ಣ ಹಂತದ ತನ್ನದೇ ಮಾಲೀಕತ್ವದ ಕಾರ್ಕಳದ ಜೋಡುರಸ್ತೆಯಲ್ಲಿರುವ ವಸತಿ ಸಮುಚ್ಚಯದ ಕಟ್ಟಡದಲ್ಲಿ ನೇಣು ಬಿಗಿದು ಉದ್ಯಮಿಯೊಬ್ಬರು ಆತ್ಮಹತ್ಯೆಗೈದಿದ್ದಾರೆ.

ಕಾರ್ಕಳದ ಜೋಡುರಸ್ತೆ ನಿವಾಸಿ ಬಿಲ್ಡರ್​ ಮಂಜುನಾಥ ಪೈ(55) ಆತ್ಮಹತ್ಯೆಗೈದವರು.

ದೇವಸ್ಥಾನಕ್ಕೆ ಹೋಗಿ ಬಂದಿದ್ದರು!

ಮಂಜುನಾಥ ಪೈ ಎಂದಿನಂತೆ ಮಂಗಳವಾರ ಮುಂಜಾನೆ ಕಾರ್ಕಳ ವೆಂಕಟರಮಣ ದೇವಸ್ಥಾನ ಹಾಗೂ ಕುಕ್ಕುಂದೂರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೋಗಿ ಬಂದು ಮನೆಯಿಂದ ನೇರವಾಗಿ ತನ್ನ ಫ್ಲಾಟ್​ಗೆ ಬಂದು ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಹಲವು ವಸತಿ ಸಮುಚ್ಚಯಗಳ ನಿರ್ಮಾತೃ

ಬಿಲ್ಡರ್​ ಆಗಿದ್ದ ಮಂಜುನಾಥ ಪೈ ಕಾರ್ಕಳದ ಸುತ್ತಮುತ್ತಲಿನಲ್ಲಿ ಹಲವು ವಸತಿ ಸಮುಚ್ಚಯಗಳನ್ನು ನಿರ್ಮಿಸಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಜೋಡುರಸ್ತೆಯಲ್ಲಿ 64 ಫ್ಲಾಟ್​ಗಳ ವಸತಿ ಸಮುಚ್ಚಯ ಹಾಗೂ ಅಂಗಡಿ ಕೋಣೆಗಳ ಹೊಸ ಪ್ರಾಜೆಕ್ಟ್​ ಆರಂಭಿಸಿದ್ದರು. ಈ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ವಿದ್ಯುತ್​ ಸಂಪರ್ಕದ ವಿಚಾರದಲ್ಲಿ ಸ್ವಲ್ಪ ಸಮಸ್ಯೆಯಾಗಿತ್ತು ಎನ್ನಲಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕಾರ್ಕಳ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.