ಕುಂದಾಪುರ: ಕುಂದಾಪುರ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯಲ್ಲಿರುವ ಗೋಲ್ಡ್ ಲೋನ್ ಶಾಖೆಯಲ್ಲಿ ಅತಿ ಕಡಿಮೆ ಬಡ್ಡಿ ದರಕ್ಕೆ ಚಿನ್ನ ಅಡಮಾನದ ಸಾಲ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಚಿನ್ನವನ್ನು ಅಡಮಾನವಿರಿಸಿಕೊಂಡು ಅವರಿಗೆ ಸಾಲ ನೀಡಿ ನಂತರ ಚಿನ್ನವನ್ನು ವಾಪಸ್ ನೀಡದೆ ವಂಚಿಸಲಾಗಿದೆ.
2025 ಸೆಪ್ಟೆಂಬರ್ನಿಂದ 2026 ನವೆಂಬರ್ವರೆಗೆ ವಂಚನೆ ನಡೆದಿದ್ದು, ಮೋಸ ಹೋದವರು ಗಂಗೊಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆರೋಪಿಗಳಾದ ಗೋವಾ ಮೂಲದ ಭೀಮಪ್ಪ ಯಲ್ಲಪ್ಪ ಛಲವಾದಿ, ಸ್ಥಳಿಯರಾದ ಸುಭಾಷ್ ಖಾರ್ವಿ, ನೇತ್ರಾವತಿ ಖಾರ್ವಿ ಅಲಿಯಾಸ್ ಸ್ವಪ್ನಿಲಾ ಪಾಲೇಕರ್, ಪ್ರಮೀತಾ ಖಾರ್ವಿ, ಅಕ್ಷಯ ಸಾರಂಗ ಎಂಬುವರು ಈವರೆಗೆ 750.98 ಗ್ರಾಂ. ಚಿನ ಅಡವಿರಿಸಿಕೊಂಡು ಸಾಲ ನೀಡಿದ್ದು, ಚಿನ್ನವನ್ನು ವಾಪಸ್ ನೀಡುವಂತೆ ಕೇಳಿದಾಗ ನಂತರ ನೀಡುವುದಾಗಿ ಹೇಳಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಸಂಸ್ಥೆಯನ್ನು ಮುಚ್ಚಿದ್ದು, ಹಲವು ಮಂದಿಗೆ ಇದೇ ರೀತಿ ವಂಚಿಸಿರುವ ಸಾಧ್ಯತೆ ಇದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.