ಉಡುಪಿಯ ಡಯಟ್ನಲ್ಲಿ ಜಿಲ್ಲಾ ವೃತ್ತಿಪರ ಮತ್ತು ವೃತ್ತಿ ಮಾರ್ಗದರ್ಶಕ ಘಟಕವನ್ನು ಪ್ರತೀಕ್ ಬಾಯಲ್ ಉದ್ಘಾಟಿಸಿದರು. ಡಾ.ಅಶೋಕ್ ಕಾಮತ್, ಯೋಗಾನರಸಿಂಹಸ್ವಾಮಿ ಕೆ.ಎಂ., ಮನೋಜ್ ಕಡಬ, ಶಿವಕುಮಾರ್, -ಡಾ.ಕಿಶೋರಕುಮಾರ್ ಶೆಟ್ಟಿ, ಸುರೇಶ್ ಭಟ್ ಹಾಗೂ ಉಪನ್ಯಾಸಕರು ಇದ್ದರು.
* ಉಪನ್ಯಾಸಕರಿಗೆ ಪ್ರತೀಕ್ ಬಾಯಲ್ ಸಲಹೆ
* ವೃತ್ತಿಪರ, ವೃತ್ತಿ ಮಾರ್ಗದರ್ಶಕ ಘಟಕ ಉದ್ಘಾಟನೆ
ಉಡುಪಿ: ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ವೈದ್ಯಕೀಯ, ಇಂಜಿನಿಯರಿಂಗ್, ಲೆಕ್ಕಪರಿಶೋಧಕ ಸೇರಿದಂತೆ ಸೀಮಿತ ವೃತ್ತಿ ಅವಕಾಶಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಪ್ರೌಢಶಾಲಾ ಹಂತದಲ್ಲಿಯೇ ನಾಗರಿಕ ಸೇವೆಗಳು, ಅಗ್ನಿನಂದಕ, ಬ್ಯೂಟಿಷಿಯನ್, ಐಟಿಐ ಇಂತಹ ಒಳ್ಳೆಯ ಅವಕಾಶಗಳ ಕ್ಷೇತ್ರಗಳ ಕುರಿತಂತೆ ಅರಿವು ಮೂಡಿಸಬೇಕು. ಅದರಿಂದ ಐಎಎಸ್, ಐಪಿಎಸ್ನಂಥ ಹುದ್ದೆಗೂ ಅವರು ಪ್ರಯತ್ನಿಸಬಹುದು ಎಂದು ಉಡುಪಿ ಜಿಪಂನ ಸಿಇಒ ಪ್ರತೀಕ್ ಬಾಯಲ್ ಸಲಹೆ ನೀಡಿದರು.
ಉಡುಪಿಯ ಡಯಟ್ನಲ್ಲಿ ಪ್ರಾರಂಭಿಸಿರುವ ಜಿಲ್ಲಾ ವೃತ್ತಿಪರ ಹಾಗೂ ವೃತ್ತಿ ಮಾರ್ಗದರ್ಶಕ ಘಟಕ ಉದ್ಘಾಟಿಸಿ ಮಾತನಾಡಿದರು.
ಮಾರ್ಗದರ್ಶನಕ್ಕೆ ಅಗತ್ಯ ಸಿದ್ಧತೆ
ಡಯಟ್ನ ಪ್ರಾಂಶುಪಾಲ ಡಾ.ಅಶೋಕ್ ಕಾಮತ್ ಮಾತನಾಡಿ, ಆಸಕ್ತ ವಿದ್ಯಾರ್ಥಿಗಳಿಗೆ ಈ ಘಟಕದ ಮೂಲಕ ನಿರಂತರ ಮಾರ್ಗದರ್ಶನ ನೀಡಲು ಸಿದ್ಥತೆ ಮಾಡಿಕೊಳ್ಳಲಾಗಿದೆ. ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಎಸ್ಎಸ್ಎಲ್ಸಿ ಫಲಿತಾಂಶದ ಬಳಿಕ ಇಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುವುದು. ಶಾಲಾ ವಿದ್ಯಾರ್ಥಿಗಳನ್ನು ಕೇಂದ್ರಕ್ಕೆ ಕರೆತರಲು ಮತ್ತು ಆಯ್ದ ಶಾಲೆಗಳಿಗೆ ಕೇಂದ್ರದ ಸಂಪನ್ಮೂಲಗಳೊಂದಿಗೆ ತೆರಳಿ ಮಾರ್ಗದರ್ಶನ ನೀಡಲಾಗುವುದು. ಸದ್ಯ ಪ್ರತಿವಲಯಗಳಲ್ಲಿ ಓರ್ವ ಕೆರಿಯರ್ ಕೌನ್ಸಿಲರ್ಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಲಾಗಿದೆ ಎಂದರು.
ಡಯಟ್ನ ಉಪಪ್ರಾಂಶುಪಾಲ ಯೋಗಾನರಸಿಂಹಸ್ವಾಮಿ ಕೆ.ಎಂ., ಶೆಪಿನ್ಸ್ ಅಕಾಡೆಮಿಯ ಮನೋಜ್ ಕಡಬ, ಸರ್ಕಾರಿ ಐಟಿಐ ಸಂಸ್ಥೆಯ ಪ್ರಾಂಶುಪಾಲ ಶಿವಕುಮಾರ್, ಸುರೇಶ್ ಭಟ್, ಡಯಟ್ ಸಂಸ್ಥೆಯ ಉಪನ್ಯಾಸಕರು ಉಪಸ್ಥಿತರಿದ್ದರು.
ವೃತ್ತಿ ಮಾರ್ಗದರ್ಶನ ಘಟಕದ ನೋಡಲ್ ಉಪನ್ಯಾಸಕ ಡಾ. ಕಿಶೋರಕುಮಾರ್ ಶೆಟ್ಟಿ ಸ್ವಾಗತಿಸಿದರು.
ಸಮಗ್ರ ಶಿಕ್ಷಣ ಕರ್ನಾಟಕ 2025-26ನೇ ಸಾಲಿನ ಆರ್ಥಿಕ ಸಹಕಾರದಲ್ಲಿ ರಾಜ್ಯಾದ್ಯಂತ ಎಲ್ಲ ಡಯಟ್ಗಳಲ್ಲಿ ಈ ಘಟಕ ಸ್ಥಾಪಿಸಲಾಗಿದೆ. ಉಡುಪಿಯ ಘಟಕದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಬಳಿಕದ ಅವಕಾಶ, ಸ್ವ-ಉದ್ಯೋಗ ಅವಕಾಶ, ವಿದ್ಯಾರ್ಥಿ ವೇತನ ಮತ್ತು ಶೈಕ್ಷಣಿಕ ಸಾಲಗಳ ಮಾಹಿತಿ ನೀಡುವ ವಿವಿಧ ಫ್ಲೆಕ್ಸ್ ಅಳವಡಿಸಲಾಗಿದೆ. ಕೆರಿಯರ್ ಕಾರ್ಡ್, ಬುಕ್ಬ್ಯಾಂಕ್ನ ಮೂಲಕ ನೀಟ್, ಜೆಇಇ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿತ ಪುಸ್ತಕಗಳೂ ಇಲ್ಲಿದೆ.