Arrest 
ಉಡುಪಿ

ರಬ್ಬರ್ ಶೀಟ್ ಯಂತ್ರ ಕಳವು, ಯುವಕನ ವಿಚಾರಣೆ

ಇಂದಿರಾ ಎನ್ ಕೆ
ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಶೇಣಿ ಏಳ್ಕಾನದಿಂದ ರಬ್ಬರ್ ಶೀಟ್ ಯಂತ್ರ ಕಳವಿಗೆ ಸಂಬಂಧಿಸಿ ಆರೋಪಿಯೊಬ್ಬನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಅರಿಯಪ್ಪಾಡಿ ಕೋಟೆ ನಿವಾಸಿ 19ರ ಹರೆಯದ ಯುವಕ ಪೊಲೀಸ್ ವಶದಲ್ಲಿದ್ದು, ಈತನನ್ನು ತನಿಖೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಶಾಮೀಲಾಗಿದ್ದಾರೆನ್ನಲಾದ ಇಬ್ಬರ ಮೇಲೆ ಪೊಲೀಸರು ನಿಗಾಯಿರಿಸಿದ್ದಾರೆ.
ಸುಮಾರು 600 ಕಿಲೋ ಭಾರದ ರಬ್ಬರ್ ಶೀಟ್ ತಯಾರಿ ಯಂತ್ರ ಕಳವುಗೈದಿರುವ ಬಗ್ಗೆ ಸೋಜನ್ ಜಾರ್ಜ್ ಎಂಬುವರು ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.