ಉಡುಪಿ: ದೇಶ ಅಭಿವೃದ್ಧಿಯ ದಿಕ್ಕಿನಲ್ಲಿ ಸಾಗುತ್ತಿದ್ದು, 2047ರ ವೇಳೆಗೆ ವಿಕಸಿತ ಭಾರತಕ್ಕೆ ಪೂರಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. 30 ಕೋಟಿ ಯುವಜನತೆ ದೇಶದ ಸಂಪತ್ತು. ಅವರಿಗೆ ಸರಿಯಾದ ಮಾರ್ಗದರ್ಶನ, ಅವಕಾಶ ಸಿಗಬೇಕು. ಆ ನಿಟ್ಟಿನಲ್ಲಿ ಯುವ ಸಂಸತ್ತು ವೇದಿಕೆಯಾಗಲಿ ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ವತಿಯಿಂದ ಎಂಜಿಎಂ ಮತ್ತು ಎನ್ಎಸ್ಎಸ್ ಸಹಯೋಗದೊಂದಿಗೆ ಶುಕ್ರವಾರ ವಿಕಸಿತ್ ಭಾರತ್ ಯಂಗ್ ಲೀಡರ್ಸ್ ಡಯಲಾಗ್ ಷೋಷವಾಕ್ಯದಡಿ ನಡೆದ ಯೂತ್ ಪಾರ್ಲಿಮೆಂಟ್ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಸಹಾಯಕ ಪ್ರಾಧ್ಯಾಪಕ ಸಂತೋಷ್ ಪ್ರಭು, ಪತ್ರಕರ್ತ ಕಿರಣ್ ಮಂಜನಬೈಲ್, ಮಾಹೆ ಸಂಶೋಧನಾರ್ಥಿ ಶ್ರೇಯಸ್ ಜಿ. ಕೋಟ್ಯಾನ್, ಉಡುಪಿಯ ಟೆಕ್ ಪಾಲಿಸಿ ಆ್ಯಂಡ್ ಸ್ಟ್ರಾಟರ್ಜಿ ಸ್ಪೆಶಲಿಸ್ಟ್ ಅಭಿಜಿಜ್ಯ ಎನ್.ಎಸ್., ಜೇಸಿ ತರಬೇತುದಾರೆ ಜ್ಯೋತಿ ಪ್ರಶಾಂತ್ ಉಪಸ್ಥಿತರಿದ್ದರು.
ಜಿಲ್ಲಾ ಮೈ ಭಾರತ್ ಪ್ರಭಾರ ನಿರ್ದೇಶಕ ಉಲ್ಲಾಸ್ ಕೆ.ಟಿ.ಕೆ. ಸ್ವಾಗತಿಸಿದರು. ಎಂಜಿಎಂ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಸುಚಿತ್ ಕೋಟ್ಯಾನ್ ನಿರೂಪಿಸಿ, ವಂದಿಸಿದರು.