suicide by hanging  
ಉಡುಪಿ

ನೇಣುಬಿಗಿದು ಯುವಕ ಆತ್ಮಹತ್ಯೆ

ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಕಾರ್ಕಳ: ತಾಲೂಕಿನ ಕೌಡೂರು ಗ್ರಾಮದ ಹಾಡಿಮನೆ ಸಮೀಪದ ನಿವಾಸಿ, ಮಣಿಪಾಲದ ಖಾಸಗಿ ಸಂಸ್ಥೆಯೊಂದರ ಉದ್ಯೋಗಿ ಸುದೇಶ್ ಭಂಡಾರಿ(33) ಎಂಬುವರು ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆಗೈದಿದ್ದಾರೆ.

ಗುರುವಾರ ಮುಂಜಾನೆ ತಮ್ಮನ ಹುಟ್ಟುಹಬ್ಬಕ್ಕೆ ಶುಭಕೋರಿ ಬಳಿಕ ರೂಮಿಗೆ ತೆರಳಿದ್ದರು. ರೂಮಿನ ಬಾಗಿಲಿಗೆ ಒಳಗಿಂದ ಚಿಲಕ ಹಾಕಿಕೊಂಡು, ಫ್ಯಾನ್‌ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುದೇಶ್ ಅವರ ಪತ್ನಿ ಗರ್ಭಿಣಿಯಾಗಿದ್ದು, ಎರಡು ದಿನಗಳಲ್ಲಿ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಲ್ಲಿದ್ದರು.

ಇಂತಹ ಸಂದರ್ಭದಲ್ಲೇ ಏಕಾಏಕಿ ಆತ್ಮಹತ್ಯೆಗೈದಿರುವುದು ಸ್ಥಳೀಯರಲ್ಲಿ ಆಘಾತವನ್ನುಂಟು ಮಾಡಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪತ್ನಿ, ತಾಯಿ ಹಾಗೂ ಸಹೋದರರನ್ನು ಅಗಲಿದ್ದಾರೆ. ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.