ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರ ಶೈಕ್ಷಣಿಕ ಸಾಧಕ ಮಕ್ಕಳನ್ನು ಅಭಿನಂದಿಸಲಾಯಿತು. ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಸಂಘದ ಅಧ್ಯಕ್ಷ ಕೆ.ಪ್ರಕಾಶ ನಾರಾಯಣ ಮೊದಲಾದವರಿದ್ದರು.
ಬೆಳ್ತಂಗಡಿ: ಮಕ್ಕಳನ್ನು ಪ್ರೋತ್ಸಾಹಿಸುವುದು ಹೆಮ್ಮೆಯ ವಿಚಾರ. ಇಂತಹ ಪ್ರೇರಣೆಯಿಂದ ಬೆಳವಣಿಗೆ ಸಾಧ್ಯ. ಯುವಜನತೆ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಬೆಳೆಯಬೇಕಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹೇಳಿದರು.
ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಮುಂಡಾಜೆ ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನದಲ್ಲಿ ಗುರುವಾರ ಎನ್.ಎಸ್.ಗೋಖಲೆ ಸಂಸ್ಮರಣಾ ವಿದ್ಯಾನಿಧಿ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.
ಎನ್.ಎಸ್.ಗೋಖಲೆ ಸಹಕಾರಿ ಕ್ಷೇತ್ರಕ್ಕಾಗಿ ತಪಸ್ಸು ಮಾಡಿದವರು. ಅಂತಹ ಹಿರಿಯರ ಮಾರ್ಗದರ್ಶನದಲ್ಲಿ ಇಂದು ದೇಶದಲ್ಲಿ 8.50 ಲಕ್ಷ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಸುಮಾರು 30 ಕೋಟಿ ಜನರು ಸಹಕಾರಿ ಸಂಘಗಳ ಸದಸ್ಯರಾಗಿದ್ದು, ಸಹಕಾರಿ ಸಂಸ್ಥೆಗಳು ಬಲವಾಗಿರುವ ಕಾರಣ ಗೌರವಯುತ ಜೀವನ ನಡೆಸುವಂತಾಗಿದೆ ಎಂದರು.
ಸಂಘದ ಅಧ್ಯಕ್ಷ ಕೆ.ಪ್ರಕಾಶ ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನದ ಆಡಳಿತ ಮೊಕ್ತೇಸರ ವಾಸುದೇವ ಗೋಖಲೆ ಮಾತನಾಡಿದರು.
ಕ್ಯಾಂಪ್ಕೊ ಕೃಷಿ ವಿಭಾಗದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಎನ್.ಆರ್., ಡಿಜಿಎಂ ಗೋವಿಂದ ಭಟ್, ಜಿಲ್ಲಾ ಸಹಕಾರ ಯೂನಿಯನ್ ಸಿಇಒ ಎಸ್.ವಿ.ಹಿರೇಮಠ, ಸಂಘದ ನಿರ್ದೇಶಕರಾದ ವೆಂಕಟೇಶ್ವರ ಭಟ್, ಶಶಿಧರ ಕಲ್ಮಂಜ, ರಾಘವ ಕಲ್ಮಂಜ, ಶಿವಪ್ರಸಾದ್ ಗೌಡ, ರವಿ ಪೂಜಾರಿ, ಅಜಯ್ ಕೆ.ಎ., ಅಶ್ವಿನಿ ಎ.ಹೆಬ್ಬಾರ್, ವೃತ್ತಿಪರ ನಿರ್ದೇಶಕರಾದ ನಾರಾಯಣ ಫಡಕೆ, ಬಾಬು ಗೌಡ ಉಪಸ್ಥಿತರಿದ್ದರು. ಉಪಾಧ್ಯಕ್ಷ ರಾಘವ ಗೌಡ ಕೆ. ಸ್ವಾಗತಿಸಿದರು.
ನಿರ್ದೇಶಕ ಚೆನ್ನಕೇಶವ ನಾಯ್ಕ ಮತ್ತು ಸಿಇಒ ಪ್ರಸನ್ನ ಪರಾಂಜಪೆ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಸುಷ್ಮಾ ಹಾಗೂ ಅಶ್ವಿನ್ ನವಾಥೆ ವಿದ್ಯಾರ್ಥಿಗಳನ್ನು ಪರಿಚಿಯಿಸಿದರು.