ಸುಧೀಶ್ 
ಉಡುಪಿ

ನೇಣು ಬಿಗಿದು ಯುವ ಗಾಯಕ ಆತ್ಮಹತ್ಯೆ

ಇಂದಿರಾ ಎನ್ ಕೆ
ಕಾಸರಗೋಡು: ಯುವ ಗಾಯಕ, ಪಿಲಿಕೋಡ್ ವಯಲ್‌ನ ಕೊತೋಳಿ ವಡಕ್ಕಿನಿಯಿಲ್ ಮಾಧವನ್ ಪುತ್ರ ಕೆ.ವಿ.ಸುಧೀಶ್ (36) ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಶನಿವಾರ ಮಧ್ಯಾಹ್ನ ಕೊಠಡಿಯಲ್ಲಿ ನೇಣಿನಲ್ಲಿ ನೇತಾಡುತ್ತಿರುವುದನ್ನು ಕಂಡು ಮನೆಯವರು ಹಾಗೂ ಆಸುಪಾಸಿನವರು ನೇಣಿನಿಂದ ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಅವರು ಉದಿನೂರು ಗಾನತರಂಗಿಣಿ ಸಂಗೀತ ತಂಡದ ಕಲಾವಿದರಾಗಿದ್ದರು. ಚಂದೇರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.