Crime 
ಉಡುಪಿ

ಯುವತಿ ವಿವಾಹಕ್ಕೆ ಯುವಕ ಅಡ್ಡಿ

ಇಂದಿರಾ ಎನ್ ಕೆ
ಕಾಸರಗೋಡು: ಯುವತಿಯ ವಿವಾಹಕ್ಕೆ ಅಡ್ಡಿಪಡಿಸುತ್ತಿರುವ ಆರೋಪದನ್ವಯ ಆದೂರು ಠಾಣೆ ಪೊಲೀಸರು ಮುಳ್ಳೇರಿಯ ಆಸುಪಾಸಿನ ಯುವಕನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.
ಯುವತಿ ನೀಡಿದ ದೂರಿನ ಮೇರೆಗೆ ಮಿದಿಲಾಜ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಮಿದಿಲಾಜ್ ತನ್ನನ್ನು ಹಿಂಬಾಲಿಸಿ ಉಪಟಳ ನೀಡುತ್ತಿರುವುದಲ್ಲದೆ, ತನ್ನ ವಿವಾಹಕ್ಕೂ ಅಡ್ಡಿಪಡಿಸುತ್ತಿರುವುದಾಗಿ ಯುವತಿ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ಆರೋಪಿ ಪತ್ತೆಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.