ಕಾರ್ಕಳ: ನಂದಳಿಕೆ ಗ್ರಾಮದ ಕಕ್ಕೆಪದವು ನಿವಾಸಿ ನವೀನ್ ಪೂಜಾರಿ(35) ಎಂಬುವರು ರಾತ್ರಿ ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ. ಎಂದಿನಂತೆ ಕೆಲಸ ಮುಗಿಸಿಕೊಂಡು ಬುಧವಾರ ರಾತ್ರಿ 11 ಗಂಟೆಗೆ ಮನೆಗೆ ಬಂದು ಊಟ ವಾಡಿ ಮಲಗಿದ್ದರು. ಬಳಿಕ ಮುಂಜಾನೆ 3.30ಕ್ಕೆ ಎದ್ದು ಮತ್ತೆ ಊಟ ಮಾಡಿ ಮಲಗಿದ್ದರು.
ಬೆಳಗ್ಗೆ 7.15ಕ್ಕೆ ಮನೆಯವರು ಅವರನ್ನು ಎಬ್ಬಿಸಲು ಪ್ರಯತ್ನಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ತಕ್ಷಣ ಅವರನ್ನು ಕಾರ್ಕಳದ ಟಿ.ಎಂ.ಎ.ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ನವೀನ್ ಮೃತಪಟ್ಟಿರುವುದಾಗಿ ದೃಢಪಡಿಸಿದರು. ಕಾರ್ಕಳ ಗ್ರಾವಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.