ಪಡುಬಿದ್ರಿ: ಉದ್ಯಾವರ ಬೊಳ್ಜೆ ವಿಭುದೇಶ ನಗರದ ಅಭಿಷೇಕ್ ಕಾಂಚನ್(34) ಎಂಬುವರು ಬುಧವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ. ಮಣಿಪಾಲದ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಅವರು, ಬುಧವಾರ ಕೆಲಸಕ್ಕೆಂದು ಹೋಗಿ ಮನೆಗೆ ವಾಪಸಾಗಿದ್ದರು.
ಮನೆಯಲ್ಲಿದ್ದ ಅವರ ಚಿಕ್ಕಮ್ಮ ಅಂಚೆ ಕಚೇರಿಗೆ ತೆರಳಿ ವಾಪಸಾಗುವ ವೇಳೆ ಮನೆಯೊಳಗಿನ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿರುವುದು ಬೆಳಕಿಗೆ ಬಂದಿದೆ. ಸಹೋದರ ಬಂದು ಮನೆಯಲ್ಲಿ ನೋಡಿದಾಗ ಆತನ ಪರ್ಸ್‌ನಲ್ಲಿ ಚೀಟಿಯೊಂದು ಪತ್ತೆಯಾಗಿದ್ದು, ಅದರಲ್ಲಿ ನನಗೆ ಕ್ಯಾನ್ಸರ್ ಇದ್ದ ಕಾರಣ ನಾನು ಸಾಯುತ್ತಿದ್ದೇನೆ ಎಂದು ಬರೆದು ಸಹಿ ಮಾಡಿಟ್ಟಿದ್ದರು. ಅಭಿಷೇಕ್‌ಗೆ ಕ್ಯಾನ್ಸರ್ ಇರುವ ವಿಷಯ ಮನೆಯವರೆಗೂ ತಿಳಿದಿರಲಿಲ್ಲ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.