ಮುರಳೀಮೋಹನ್ 
ಉಡುಪಿ

ನೇಣು ಬಿಗಿದು ಯುವಕ ಆತ್ಮಹತ್ಯೆ

ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಪೆರ್ಲ ಸನಿಹದ ಪಳ್ಳಕ್ಕಾನ ನಿವಾಸಿ ಮುರಳೀಮೋಹನ್(36)ಎಂಬುವರ ಮೃತದೇಹ ಪತ್ನಿ ಮನೆ ಬದಿಯಡ್ಕ ಕಾನತ್ತಿಲ ಸನಿಹದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರು ಕೂಲಿ ಕಾರ್ಮಿಕರಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಮರದಿಂದ ಬಿದ್ದು ಕಾರ್ಮಿಕ ಮೃತ್ಯು

ಕಾಸರಗೋಡು: ಮರದಿಂದ ಬಿದ್ದು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದಾರೆ. ಕುತ್ತಿಕ್ಕೋಲು ಕರಿವೆಡಗಂ 13ನೇ ವಾರ್ಡ್ ನರಿಯನ್ನಪುನ್ನಿಯ ನಿವಾಸಿ, ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತ ಎಂ.ನಾರಾಯಣ್(48) ಮೃತಪಟ್ಟವರು. ಭಾನುವಾರ ಮನೆ ಸನಿಹದ ಮರದಿಂದ ಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ನಾರಾಯಣನ್ ಕೂಲಿ ಕಾರ್ಮಿಕರಾಗಿದ್ದರು.