ಬೆಲ್ಲದ ಗಣಪತಿ ದೇವಸ್ಥಾನದ ಎದುರು ರಂಜಿತ್ ಸೋಮಯಾಜಿ ಕತ್ತಿ ಝಳಪಿಸುತ್ತಿರುವುದು.
- ಹೆದ್ದಾರಿ ಅಡ್ಡಗಟ್ಟಿ ದುಸ್ಸಾಹಸ
- ಪೊಲೀಸರಿಗೂ ಥಳಿತ
- ಮಗನನ್ನು ಬಿಡುವಂತೆ ಅಂಗಲಾಚಿದ ತಂದೆ
ರಾಷ್ಟ್ರೀಯ ಹೆದ್ದಾರಿ ಸಮೀಪದ ಬೆಲ್ಲದ ಗಣಪತಿ ದೇವಸ್ಥಾನದ ಎದುರು ಮಂಗಳವಾರ ಯುವಕನೊಬ್ಬ ಕತ್ತಿ ಝಳಪಿಸಿ ಸಾರ್ವಜನಿಕರನ್ನು ಕೆಲಕಾಲ ಆತಂಕಕ್ಕೀಡು ಮಾಡಿದ್ದಾನೆ.
ಹೆದ್ದಾರಿ ಅಡ್ಡಗಟ್ಟಿ ದುಸ್ಸಾಹಸ
ಬೆಲ್ಲದ ಗಣಪತಿ ದೇವಸ್ಥಾನದ ಎದುರು ರಂಜಿತ್ ಸೋಮಯಾಜಿ ಕತ್ತಿ ಝಳಪಿಸುತ್ತಿರುವುದು. ರಂಜಿತ್ ಸೋಮಯಾಜಿ ಎಂಬಾತ ಹೆದ್ದಾರಿಯ ಮಧ್ಯದಲ್ಲಿ ಟಿವಿ ಹಾಗೂ ಮರದ ಟೇಬಲ್, ಸೌಂಡ್ ಅಳವಡಿಸಿ ಯೂಟ್ಯೂಬ್ ಚಾನೆಲ್ ಎನ್ನುತ್ತ ಹೆದ್ದಾರಿ ಅಡ್ಡಗಟ್ಟಿ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ್ದಾನೆ. ಈತನನ್ನು ಪ್ರಶ್ನಿಸಿದ ತೆಕ್ಕಟ್ಟೆಯ ವೆಂಕಟೇಶ ವೈದ್ಯ ಎಂಬುವರನ್ನೂ ನಿಂದಿಸಿದ್ದಾನೆ. ಇದನ್ನು ಗಮನಿಸಿದ ಸ್ಥಳಿಯರು ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರಿಗೂ ಥಳಿತ:
ಸ್ಥಳಕ್ಕಾಗಮಿಸಿದ ಕೋಟ ಪೊಲೀಸರು ಬಂಧಿಸಲು ಮುಂದಾದಾಗ, ಪೊಲೀಸರಿಗೂ ಥಳಿಸಿದ್ದಾನೆ. ಸಾರ್ವಜನಿಕರ ಸಹಕಾರದೊಂದಿಗೆ ಆತನನ್ನು ಬಂಧಿಸಲಾಯಿತು.
ಮಗನನ್ನು ಬಿಡುವಂತೆ ಅಂಗಲಾಚಿದ ತಂದೆ:
ಬೆಲ್ಲದ ಗಣಪತಿ ದೇವಸ್ಥಾನದ ಎದುರು ರಂಜಿತ್ ಸೋಮಯಾಜಿ ಭಿತ್ತಿಪತ್ರ ಪ್ರದರ್ಶಿಸುತ್ತಿರುವುದು. ಸ್ಥಳಕ್ಕಾಗಮಿಸಿದ ತಂದೆ ಆತನಿಗೆ ಅಸ್ವಸ್ಥತೆ ಇದ್ದು, ಬಿಡುವಂತೆ ಅಂಗಲಾಚಿದರು. ತಂದೆಯ ಕಣ್ಣೀರಿಗೆ ಕರಗಿದ ಪೊಲೀಸರು ಆತನನ್ನು ಕಳುಹಿಸಿದರು. ತಕ್ಷಣವೇ ತನ್ನ ಅಂಗಡಿಗೆ ತೆರಳಿ ಕೊಡಲಿ, ಕತ್ತಿ ಹಿಡಿದು ಮತ್ತೆ ವೆಂಕಟೇಶ ವೈದ್ಯ ಹಾಗೂ ಪೊಲೀಸರನ್ನು ಅಟ್ಟಾಡಿಸಲು ಆರಂಭಿಸಿದ್ದಾನೆ. ಇದನ್ನು ಗಮನಿಸಿದ ಸ್ಥಳಿಯರು ಆತನನ್ನು ಮತ್ತೆ ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಕೋಟ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.