ಮಾಹೆಯ ವಿದ್ಯಾರ್ಥಿ ವ್ಯವಹಾರಗಳ ವಿಭಾಗದ ನಿಕಟಪೂರ್ವ ನಿರ್ದೇಶಕಿ ಡಾ. ಗೀತಾ ಮಯ್ಯ ಅವರನ್ನು ಸನ್ಮಾನಿಸಲಾಯಿತು.  
ಉಡುಪಿ

ಆಧುನಿಕ ಜೀವನಶೈಲಿ ಸವಾಲುಗಳಿಗೆ ಯೋಗ ಸರಳ ಪರಿಹಾರ

ಉಡುಪಿ: ಭಾರತವು ಜಗತ್ತಿಗೆ ನೀಡಿದ ಅಮೂಲ್ಯ ಕೊಡುಗೆ ಯೋಗ ವಿಶ್ವದ 190ಕ್ಕೂ ಹೆಚ್ಚು ದೇಶಗಳಲ್ಲಿ ಜನಪ್ರಿಯವಾಗಿದೆ. ಆಧುನಿಕ ಜೀವನಶೈಲಿಯ ಕಾಯಿಲೆ ಮತ್ತು ವೃದ್ಧಾಪ್ಯದ ಸವಾಲುಗಳಿಗೆ ಯೋಗವು ಅತ್ಯುತ್ತಮ, ಸರಳ ಪರಿಹಾರವಾಗಿದೆ. ವೈದ್ಯ ವಿಜ್ಞಾನವು ಆಯಸ್ಸನ್ನು ಹೆಚ್ಚಿಸಿದರೆ ಯೋಗವು ಜೀವನೋತ್ಸಾಹ ತುಂಬುತ್ತದೆ ಎಂದು ಮಾಹೆ ಕುಲಪತಿ ಡಾ. ಶರತ್​ ಕೆ. ರಾವ್​ ಹೇಳಿದರು.

ಮಣಿಪಾಲ್​ ಅಕಾಡೆಮಿ ಆಫ್​ ಹೈಯರ್​ ಎಜುಕೇಶನ್​ (ಮಾಹೆ) ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಅಂಗವಾಗಿ ಮಾಹೆಯ ಸಮಗ್ರ ವೈದ್ಯಕಿಯ ಮತ್ತು ಸಂಶೋಧನಾ ಕೇಂದ್ರದ ಯೋಗ ವಿಭಾಗದ ವತಿಯಿಂದ ನಡೆದ ಯೋಗ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಮಾಹೆಯ ಆರೋಗ್ಯ ವಿಜ್ಞಾನ ವಿಭಾಗದ ಸಹ ಉಪಕುಲಪತಿ ಮೇಜರ್​ ಜನರಲ್​ ಮ್ಯಾಥ್ಯೂಸ್​ ಜೇಕಬ್​ ಮಾತನಾಡಿ, ದೀರ್ಘಕಾಲಿಕ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾಹೆಯ ವಿದ್ಯಾರ್ಥಿ ವ್ಯವಹಾರಗಳ ವಿಭಾಗದ ನಿಕಟಪೂರ್ವ ನಿರ್ದೇಶಕಿ ಡಾ. ಗೀತಾ ಮಯ್ಯ ಅವರನ್ನು ಸನ್ಮಾನಿಸಲಾಯಿತು. ಸಂದರ್ಶಕ ಪ್ರಾಧ್ಯಾಪಕ ಡಾ. ನಾಗಭೂಷಣ ಮೂಲ್ಕಿ ಉಪಸ್ಥಿತರಿದ್ದರು. ಯೋಗ ವಿಭಾಗದ ಮುಖ್ಯಸ್ಥ ಡಾ. ನಿತಿನ್​ ಪಾಟೀಲ್​ ಸ್ವಾಗತಿಸಿದರು. ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶಕಿ ಡಾ. ಪೂರ್ಣಿಮಾ ಪಾಂಡುರಂಗ ಕುಂದಾಪುರ ವಂದಿಸಿದರು.