ಉಡುಪಿ ಜಿಲ್ಲಾ ವಾಲಿಬಾಲ್​ ಅಸೋಸಿಯೇಷನ್​ ಅಧ್ಯಕ್ಷರಾಗಿ ಆಯ್ಕೆಯಾದ ಯಶವಂತ್​ ಸುವರ್ಣ. 
ಉಡುಪಿ

ಅಧ್ಯಕ್ಷರಾಗಿ ಯಶವಂತ್​ ಸುವರ್ಣ ಆಯ್ಕೆ

* ಉಡುಪಿ ಜಿಲ್ಲಾ ವಾಲಿಬಾಲ್​ ಅಸೋಸಿಯೇಷನ್​

* ಗೌರವಾಧ್ಯಕ್ಷರಾಗಿ ಶಾಸಕ ಯಶ್​ಪಾಲ್​ ಸುವರ್ಣ

ಉಡುಪಿ: ಉಡುಪಿ ಜಿಲ್ಲಾ ವಾಲಿಬಾಲ್​ ಅಸೋಸಿಯೇಷನ್​ ಅಧ್ಯಕ್ಷರಾಗಿ ಯಶವಂತ್​ ಸುವರ್ಣ ಹಾಗೂ ಗೌರವಾಧ್ಯಕ್ಷರಾಗಿ ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ರಾಹುಲ್​ ಡಿ. ಶೆಟ್ಟಿ, ಕಾರ್ಯದರ್ಶಿಯಾಗಿ ಮಂಜುನಾಥ್​ ಪಾಟ್ಕರ್​, ಸಹ ಕಾರ್ಯದರ್ಶಿಗಳಾಗಿ ಸ್ಟೀಫನ್​ ಎಸ್​. ಪಿಂಟೋ, ಸಚಿನ್​ ಸುವರ್ಣ, ಖಜಾಂಚಿಯಾಗಿ ಸಚಿನ್​ ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳಾಗಿ ಪ್ರತೀಕ್ಷಾ ಕೆ., ಕೌಶಲ್ಯಾ ಬಂಗೇರ, ಅಕ್ಷಯಾ ಶೆಟ್ಟಿ, ಸುಮನ್​ ಕುಮಾರ್​, ಸಚಿನ್​ ಪೂಜಾರಿ, ಜಾಯ್​ ಸಂದೀಪ್​ ಗೊನ್ಸಾಲ್ವಿಸ್​, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾರ್ತಿಕ್​, ಭಾಸ್ಕರ್​, ಪ್ರಜ್ಞಾ ಜನಾರ್ದನ ಕೊಡವೂರು, ಸುಶಾಂತ್​, ಸತ್ಯ ಕುಮಾರ್​, ವಿನಯ್​ ಶೇಟ್​ ನೇಮಕಗೊಂಡಿದ್ದಾರೆ ಎಂದು ಉಡುಪಿ ಜಿಲ್ಲಾ ವಾಲಿಬಾಲ್​ ಅಸೋಸಿಯೇಷನ್​ ಪ್ರಕಟಣೆಯಲ್ಲಿ ತಿಳಿಸಿದೆ.
"

ಉಡುಪಿ ಜಿಲ್ಲೆಯ ಪ್ರತಿಭಾವಂತ ವಾಲಿಬಾಲ್​ ಕ್ರೀಡಾಪಟುಗಳಿಗೆ ವಿಶೇಷ ಪ್ರೋತ್ಸಾಹದೊಂದಿಗೆ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ಕಲ್ಪಿಸುವ ಉದ್ದೇಶದಿಂದ ವಾಲಿಬಾಲ್​ ಅಸೋಸಿಯೇಷನ್​ ಸ್ಥಾಪನೆಗೊಂಡಿದೆ. ಮುಂದಿನ ದಿನಗಳಲ್ಲಿ ವಾಲಿಬಾಲ್​ ಕ್ರೀಡಾಪಟುಗಳಿಗೆ ಸಾಧನೆ ಮಾಡಲು ಈ ಸಂಘಟನೆಯು ಅಗತ್ಯ ಸಹಕಾರ ನೀಡಲಿದೆ.

— ಯಶ್​ಪಾಲ್​ ಸುವರ್ಣ. ಉಡುಪಿ ಶಾಸಕ.