ಉಡುಪಿಯ ಶಾಸಕರ ಕಚೇರಿಯಲ್ಲಿ ವಿವಿಧ ಫಲಾನುಭವಿಗಳಿಗೆ ವೃತ್ತಿಗೆ ಪೂರಕ ಕಿಟ್​ಗಳನ್ನು ಯಶ್​ಪಾಲ್​ ಸುವರ್ಣ ವಿತರಿಸಿದರು. ಜಿ. ವಾಮನ್​ ನಾಯಕ್​, ಶೋಭಾ, ಲಲಿತಾಬಾಯಿ, ಕೆ. ಶಾಂತಾರಾಮ್​ ಶೆಟ್ಟಿ ಇತರರಿದ್ದರು. 
ಉಡುಪಿ

ಬದುಕಿಗೆ ಆಧಾರವಾಗಲಿ ಸರ್ಕಾರಿ ಯೋಜನೆ

ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಆಶಯ

* ಫಲಾನುಭವಿಗಳಿಗೆ ವಿವಿಧ ಕಿಟ್​ ವಿತರಣೆ

ಉಡುಪಿ: ವಿವಿಧ ವೃತ್ತಿಯಲ್ಲಿ ತೊಡಗಿರುವವರಿಗೆ ಅಗತ್ಯವಿರುವ ಕಿಟ್​ ನೀಡಲಾಗುತ್ತಿದ್ದು, ಅದರಿಂದ  ಉದ್ಯೋಗದಲ್ಲಿ ಸ್ಥಿರತೆ ಹಾಗೂ ಆದಾಯ ಹೆಚ್ಚಳಕ್ಕೆ ಸಹಾಯವಾಗಲಿದೆ. ಜೀವನೋಪಾಯ ಸುಧಾರಿಸಿಕೊಳ್ಳಲು ಸರ್ಕಾರ ವಿವಿಧ ಯೋಜನೆ, ನೆರವು ನೀಡುತ್ತಿದೆ. ಪ್ರಮುಖವಾಗಿ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡಲು ಸರ್ಕಾರ ಅನೇಕ ಯೋಜನೆ ಜಾರಿಗೆ ತಂದಿದ್ದು, ಫಲಾನುಭವಿಗಳ ಬದುಕಿಗೆ ಹಾಗೂ ಸ್ವಾವಲಂಬಿ ಜೀವನ ನಡೆಸಲು ಆಧಾರವಾಗಲಿ ಎಂದು ಶಾಸಕ ಯಶ್​ಪಾಲ್​ ಸುವರ್ಣ ಆಶಯ ವ್ಯಕ್ತಪಡಿಸಿದರು.
ಉಡುಪಿಯ ಶಾಸಕರ ಕಚೇರಿಯಲ್ಲಿ 2025&26ನೇ ಸಾಲಿನ ವೃತ್ತಿಪರ ಕುಶಲಕರ್ಮಿಗಳಿಗೆ ಸುಧಾರಿತ ಉಪಕರಣ ಪೂರೈಕೆ ಉಚಿತ ಯೋಜನೆಯಡಿ ಆಯ್ಕೆಯಾದ ವಿವಿಧ 55 ಫಲಾನುಭವಿಗಳಿಗೆ ಟೈಲರಿಂಗ್​ ಮಿಷನ್​, ಮರಗೆಲಸ, ಗಾರೆ ಕೆಲಸ, ಇಲೆಕ್ಟ್ರೀಷಿಯನ್​, ಬ್ಯೂಟಿ ಪಾರ್ಲರ್​ ಕಿಟ್​ಗಳನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿಯೇ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಮೂಲಕ ಕೃಷ್ಣ ಪೂಜಾರಿ ಅವರಿಗೆ ಕೃತಕ ಕಾಲು ವಿತರಿಸಲಾಯಿತು.
ಗ್ರಾಮಾಂತರ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಜಿ. ವಾಮನ್​ ನಾಯಕ್​, ಹಂದಾಡಿ ಗ್ರಾಪಂನ ಮಾಜಿ ಅಧ್ಯೆ ಶೋಭಾ, ನಿವೃತ್ತ ಶಿಕ್ಷಕಿ ಲಲಿತಾಬಾಯಿ, ಕೆಂಜೂರು ಶಾಲೆಯ ಮುಖ್ಯ ಶಿಕ್ಷಕ ಕೆ. ಶಾಂತಾರಾಮ್​ ಶೆಟ್ಟಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.