ಕೋಟ: ಕಳೆದ ನಾಲ್ಕುವರೆ ದಶಕಗಳಿಂದ ಗುಣಾತ್ಮಕ ಯಕ್ಷಗಾನ ಪ್ರದರ್ಶನ, ಪ್ರಾತ್ಯಕ್ಷಿಕೆ, ಕಮ್ಮಟ, ತಾಳಮದ್ದಳೆ, ಯಕ್ಷಗಾನ ಉತ್ಸವ, ಗಾನ ವೈಭವ, ಪುಸ್ತಕ ಬಿಡುಗಡೆ, ನಿರಂತರ ಯಕ್ಷಗಾನ ತರಬೇತಿ ಹೀಗೆ ಸದಾ ಚಟುವಟಿಕೆಯಿಂದಿರುವ ಕೆ.ಮೋಹನ್ ನಿರ್ದೇಶನದ ಬೆಂಗಳೂರಿನ ಯಕ್ಷದೇಗುಲ ತಂಡದವರಿಂದ ಮೊದಲ ಬಾರಿಗೆ ಇಸ್ರೇಲ್‌ನಲ್ಲಿ ನವೆಂಬರ್ 2ರಿಂದ 4ರ ವರೆಗೆ ಭಾರತೀಯ ವಿದೇಶಾಂಗ ಸಚಿವಾಲಯದ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತಿನ ಆಶ್ರಯದಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಈ ಪ್ರದರ್ಶನ ಆಶ್ಕೆಲೋನ್, ಪೆಟಾಕ್‌ಟಿಕ್ವಾ ನಗರದಲ್ಲಿ ಕಂಸವಧೆ, ಅಭಿಮನ್ಯು ಕಾಳಗ ಮತ್ತು ಯಕ್ಷದೇಗುಲ ಪರಿಕಲ್ಪನೆಯ ಯಕ್ಷಗಾನ ಪ್ರಾತ್ಯಕ್ಷಿಕೆ ನಡೆಯಲಿದೆ.
ಕಲಾವಿದರಾಗಿ ಕೆ.ಮೋಹನ್, ಸುದರ್ಶನ ಉರಾಳ, ಪ್ರಿಯಾಂಕಾ ಕೆ.ಮೋಹನ್, ಲಂಬೋದರ ಹೆಗಡೆ, ಸುಜಯೀಂದ್ರ ಹಂದೆ, ಉದಯ ಹೆಗಡೆ ಕಡಬಾಳ, ದಿನೇಶ್ ಕನ್ನಾರ್, ದೇವರಾಜ ಕರಬ, ವಿಶ್ವನಾಥ ಉರಾಳ, ಸುದೀಪ ಉರಾಳ, ಶ್ರೀರಾಮ ಹೆಬ್ಬಾರ್ ಮತ್ತು ಶ್ರೀವಿದ್ಯಾ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.