ಉಡುಪಿಯಲ್ಲಿ ಆಯೋಜಿಸಿದ್ದ ವಿದ್ಯಾಪೋಷಕ್​ ಸಮಾವೇಶವನ್ನು ಟಿ.ಅಶೋಕ್​ ಪೈ ಉದ್ಘಾಟಿಸಿದರು. ಸಂಪತ್​ ಕುಮಾರ್​ ಶೆಟ್ಟಿ, ಪ್ರವೀಣ್​ ಗುಡಿ, ಪುರುಷೋತ್ತಮ್​ ಶೆಟ್ಟಿ, ಸುರೇಶ್​ ನಾಯಕ್​, ಎಚ್​.ನಾಗರಾಜ್​ ಶೆಟ್ಟಿ, ಪಿ.ಕಿಶನ್​ ಹೆಗ್ಡೆ, ವಿ.ಜಿ. ಶೆಟ್ಟಿ, ಪ್ರೊ. ಕೆ.ಸದಾಶಿವ್​ ರಾವ್​, ಎಂ.ಗಂಗಾಧರ್​ ರಾವ್​, ಮುರಳಿ ಕಡೆಕಾರ್​, ನಾರಾಯಣ ಎಂ. ಹೆಗಡೆ ಇದ್ದರು. 
ಉಡುಪಿ

ಬೆರಗು ಮೂಡಿಸಿದೆ ಯಕ್ಷಗಾನ ಕಲಾರಂಗದ ಸೇವೆ

ಡಾ. ಟಿಎಂಎ ಪೈ

ಟ್ರಸ್ಟ್​ನ ಅಧ್ಯಕ್ಷ

ಟಿ.ಅಶೋಕ್​ ಪೈ ಬಣ್ಣನೆ 

* ವಿದ್ಯಾಪೋಷಕ್​ ವಿದ್ಯಾರ್ಥಿಗಳು, ಪಾಲಕರ ಸಮಾವೇಶ

ಉಡುಪಿ: ಐದು ದಶಕದ ಹಿಂದೆ ಹೆಣ್ಣುಮಕ್ಕಳು ಶಾಲೆಗೆ ಹೋಗಲು ಹಿಂಜರಿಯುತ್ತಿದ್ದರು. ಅಂತಹ ಕಾಲದಲ್ಲಿ ಡಾ. ಟಿಎಂಎ ಪೈ ಸ್ಥಾಪಿಸಿದ ವಿದ್ಯಾ ಸಂಸ್ಥೆಗಳಲ್ಲಿ ಹುಡುಗಿಯರ ಶಿಕ್ಷಣಕ್ಕೆ ಪ್ರಥಮ ಮಹತ್ವ ಕೊಟ್ಟಿದ್ದರು. ಇಂದಿನ ಈ ಸಭಾಂಗಣದಲ್ಲಿ ವಿದ್ಯಾರ್ಥಿನಿಯರೇ ಅಧಿಕ ಸಂಖ್ಯೆಯಲ್ಲಿರುವುದು ಶಿಕ್ಷಣದ ಶಕ್ತಿಗೆ ನಿದರ್ಶನ. ಯಕ್ಷಗಾನ ಕಲಾರಂಗ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ಮನೆ ನಿರ್ಮಾಣ ಸೇರಿ ಆ ಕುಟುಂಬದ ಸಂಕಷ್ಟಗಳಿಗೆ ಸ್ಪಂದಿಸುವ ರೀತಿ ಬೆರಗು ಮೂಡಿಸುತ್ತದೆ ಎಂದು ಮಣಿಪಾಲದ ಡಾ. ಟಿಎಂಎ ಪೈ ಚಾರಿಟೇಬಲ್​ ಟ್ರಸ್ಟ್​ನ ಅಧ್ಯಕ್ಷ ಟಿ.ಅಶೋಕ್​ ಪೈ ಹೇಳಿದರು.
ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ಸಂಸ್ಥೆಯ ವಿದ್ಯಾಪೋಷಕ್​ ಯೋಜನೆಯಡಿ ಈ ವರ್ಷ ಆಯ್ಕೆಗೊಂಡ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಮತ್ತು ಪಾಲಕರಿಗಾಗಿ ಮಂಗಳವಾರ (ಆ.25) ಆಯೋಜಿಸಿದ್ದ ಸಮಾಲೋಚನಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಸಾಧನೆಗೆ ಪರಿಶ್ರಮ ಅಗತ್ಯ

ಕೃಷ್ಣ ಪ್ರಸಾದ್​ ಕ್ಯಾಶ್ಯೂ ಇಂಡಸ್ಟ್ರೀಸ್​ನ ಮಾಲೀಕ ಸಂಪತ್​ ಕುಮಾರ್​ ಶೆಟ್ಟಿ ಮಾತನಾಡಿ, ಕನಸು ಕಾಣುತ್ತ ಕುಳಿತರೆ ಉದ್ದೇಶಿತ ಗುರಿ ಸಾಧಿಸಲು ಅಸಾಧ್ಯ. ಅದಕ್ಕೆ ನಿರಂತರ ಪರಿಶ್ರಮ ಅಗತ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಡಾ. ಸುದರ್ಶನಮೂರ್ತಿ, ಡಾ. ಲಕ್ಷ್ಮೀ ಎಸ್​. ಮೂರ್ತಿ, ಹುಬ್ಬಳ್ಳಿಯ ಮೈ ಲೈಫ್​ ಸಂಸ್ಥೆಯ ಸ್ಥಾಪಕ ಪ್ರವೀಣ್​ ಗುಡಿ ಇತರರು ಮಾರ್ಗದರ್ಶಿ ಮಾತುಗಳನ್ನಾಡಿದರು.
ಉಜ್ವಲ ಡೆವಲಪರ್ಸ್​ನ ಪುರುಷೋತ್ತಮ್​ ಶೆಟ್ಟಿ, ಯು.ಎಸ್​. ನಾಯಕ್​ ಚಾರಿಟೇಬಲ್​ ಟ್ರಸ್ಟ್​ನ ಸಿಎ ಸುರೇಶ್​ ನಾಯಕ್​, ಮಲ್ನಾಡ್​ ಕ್ಯಾಶ್ಯೂವಿನ ಎಚ್​.ನಾಗರಾಜ್​ ಶೆಟ್ಟಿ, ಸಂಸ್ಥೆಯ ಉಪಾಧ್ಯಕ್ಷರಾದ ಪಿ.ಕಿಶನ್​ ಹೆಗ್ಡೆ, ವಿ.ಜಿ. ಶೆಟ್ಟಿ, ಕೋಶಾಧಿಕಾರಿ ಪ್ರೊ. ಕೆ.ಸದಾಶಿವ್​ ರಾವ್​ ಉಪಸ್ಥಿತರಿದ್ದರು.
ಸಂಸ್ಥೆಯ ಸದಸ್ಯರಾದ ಯು.ವಿಶ್ವನಾಥ್​ ಶೆಣೈ, ಯು.ಎಸ್​. ರಾಜಗೋಪಾಲ್​ ಆಚಾರ್ಯ, ವಿಜಯ ಕುಮಾರ ಮುದ್ರಾಡಿ, ಭುವನಪ್ರಸಾದ್​ ಹೆಗ್ಡೆ, ಅನಂತರಾಜ ಉಪಾಧ್ಯ, ನಿರಂಜನ ಭಟ್​, ಮರ್ಣೆ ಉಮೇಶ ಭಟ್​, ಗಣೇಶ್​ ರಾವ್​ ಎಲ್ಲೂರು, ಅಶೋಕ್​ ಎಂ., ನಟರಾಜ್​ ಉಪಾಧ್ಯಾಯ, ಸಂತೋಷ್​ ಶೆಟ್ಟಿ, ಪ್ರಭಾಕರ್​ ಭಂಡಿ, ಡಾ. ಪ್ರತಿಮಾ ಜೆ. ಆಚಾರ್ಯ, ಡಾ. ರಾಘವೇಂದ್ರ ರಾವ್​, ಆರ್​. ವಸಂತ್​, ರಂಜಿನಿ ವಸಂತ್​, ತಾರಾದೇವಿ, ನಾಗರಾಜ್​ ಹೆಗಡೆ ಪಾಲ್ಗೊಂಡಿದ್ದರು.

ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ್​ ರಾವ್​ ಸ್ವಾಗತಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್​ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಸಹಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ವಂದಿಸಿದರು.

ಪ್ರಸ್ತುತ ವರ್ಷ ವಿದ್ಯಾಪೋಷಕ್​ಗೆ ಕನ್ನಡ ಮಾಧ್ಯಮದಲ್ಲಿ ಓದಿ ಶೇ.80ಕ್ಕಿಂತಲೂ ಅಧಿಕ ಅಂಕ ಗಳಿಸಿದ್ದ ಒಟ್ಟು 652 ಅರ್ಜಿ ಬಂದಿದ್ದು ಅದರಲ್ಲಿ ಆಯ್ಕೆಯಾದ 291 ವಿದ್ಯಾರ್ಥಿಗಳು ಮತ್ತು ಅವರ ಪಾಲಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಅಗಲಿದ ವಿದ್ಯಾಪೋಷಕ್​ ವಿದ್ಯಾರ್ಥಿನಿ ಪ್ರಮಿತಾಳಿಗೆ ನುಡಿನಮನ ಸಲ್ಲಿಸಲಾಯಿತು.