ಯಕ್ಷಗಾನ ಬಯಲಾಟ ರಜತ ಯಕ್ಷ ಸಂಭ್ರಮ ಕಾರ್ಯಕ್ರಮದಲ್ಲಿ ಶ್ರೀನಿವಾಸ ನಾಯಕ್ ಚೆಗ್ರಿಬೆಟ್ಟು ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಪಿ.ಕಿಶನ್ ಹೆಗ್ಡೆ, ಭಾಸ್ಕರ ನಾಯಕ್ ಚೆಗ್ರಿಬೆಟ್ಟು, ಎಂ.ಅಭಿಜಿತ್, ಶಶಿಧರ ಶೆಟ್ಟಿ ಮತ್ತಿತರರಿದ್ದರು.
ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ಯಕ್ಷಗಾನ ಕಲೆ ಎಲ್ಲರನ್ನೂ ಆಕರ್ಷಿಸುವ ಕಲೆ. ಯಕ್ಷಗಾನ ಆರಾಧನಾ ಕಲೆ ಮತ್ತು ಮನರಂಜನಾ ಕಲೆಯಾಗಿ ಕಾಣಿಸಿಕೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಯುಗ ಜನಾಂಗವನ್ನು ಹೆಚ್ಚು ಆಕರ್ಷಿಸುತ್ತಿದೆ ಎಂದು ನಾಲ್ಕು ಮೇಳದ ಯಜಮಾನ ಪಿ.ಕಿಶನ್ ಹೆಗ್ಡೆ ಹೇಳಿದರು.
ಕೊಕ್ಕರ್ಣೆ ಚೆಗ್ರಿಬೆಟ್ಟುವಿನ ಮಡಾಮಕ್ಕಿ ಮೇಳದ ರಂಗವೇದಿಕೆಯಲ್ಲಿ ಶನಿವಾರ ಮಡಾಮಕ್ಕಿ ಶ್ರೀ ವೀರಭದ್ರಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿಯಿಂದ 25ನೇ ವರ್ಷದ ಯಕ್ಷಗಾನ ಬಯಲಾಟ ರಜತ ಯಕ್ಷ ಸಂಭ್ರಮ-2026 ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಚೆ ಇಲಾಖೆ ನಿವೃತ್ತ ಸಿಬ್ಬಂದಿ ಭಾಸ್ಕರ ನಾಯಕ್ ಚೆಗ್ರಿಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಸೂರಾಲು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ಎಂ.ಅಭಿಜಿತ್, ಶ್ರೀ ಕ್ಷೇತ್ರ ಮಡಾಮಕ್ಕಿ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಶಶಿಧರ ಶೆಟ್ಟಿ, ಬೈದೆಬೆಟ್ಟು ಶ್ರೀರಾಮ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಶಾಂತರಾಜ್ ಶೆಟ್ಟಿ, ಉದ್ಯಮಿ ರಘುರಾಮ್ ಸಿ.ಎ. ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ವೀರಭದ್ರಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಮಡಾಮಕ್ಕಿ ಅವರಿಂದ ಸ್ವರ್ಣ ಸಿಂಧೂರ ಯಕ್ಷಗಾನ ಬಯಲಾಟ ಜರುಗಿತು. ಶಶಿಧರ್ ಶೆಟ್ಟಿ ನಂಚಾರು ಸ್ವಾಗತಿಸಿದರು. ಶ್ರೀನಿವಾಸ ನಾಯಕ್ ಪ್ರಸ್ತಾವನೆಗೈದರು. ಗಣೇಶ್ ನಾಯ್ಕ, ಶಶಿಧರ ಶೆಟ್ಟಿ ನಂಚಾರು, ರವೀಂದ್ರ ನಾಯ್ಕ, ಶಿವಾನಂದ ಆಚಾರ್ಯ ಸನ್ಮಾನಿತರ ಪಟ್ಟಿ ವಾಚಿಸಿದರು. ಮಹೇಶ್ ಆಚಾರ್ಯ ನಿರೂಪಿಸಿದರು.
ಸನ್ಮಾನ, ಗೌರವಾರ್ಪಣೆ
ವಿವಿಧ ಕ್ಷೇತ್ರಗಳ ಸಾಧಕರಾದ ಶ್ರೀಧರ್ ನಾಯಕ್ ಕರಬರಬೆಟ್ಟು, ನಾಗರಾಜ ಉಳಿತ್ತಾಯ ಚೆಗ್ರಿಬೆಟ್ಟು, ಲಕ್ಷ್ಮಣ ನಾಯಕ್ ಗುಂಡಿಬೈಲು, ಶ್ರೀನಿವಾಸ ನಾಯಕ್ ಚೆಗ್ರಿಬೆಟ್ಟು ಅವರಿಗೆ ಸನ್ಮಾನ, ಕೃಷಿ ಕ್ಷೇತ್ರದ ಸಾಧಕ ಸುರೇಂದ್ರ ನಾಯ್ಕ ಮೊಗೆಬೆಟ್ಟು, ಶಿಕ್ಷಣ ಕ್ಷೇತ್ರದ ಸಾಧಕಿ ಸುಪ್ರೀತಾ ದೂಪದಹಾಡಿ ಅವರಿಗೆ ಗೌರವಾರ್ಪಣೆ, ಯಕ್ಷಗಾನ ಪ್ರಸಂಗಕರ್ತೆ ವಕ್ವಾಡಿ ಅಂಬಿಕಾ ಪೂಜಾರಿ ಮತ್ತು ಹೆದ್ದಾರಿಮನೆ ನರಸಿಂಹ ನಾಯ್ಕ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.